HEALTH TIPS

ಪಾಕಿಸ್ತಾನದಲ್ಲಿನ ಭಾರತೀಯ ಹೈಕಮಿಷನ್‌ ಕಚೇರಿಗೆ ಮೊದಲ ಮಹಿಳಾ ಅಧಿಕಾರಿ ನೇಮಕ

              ವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿಯ ರಾಯಭಾರ ವ್ಯವಹಾರಗಳ ಪ್ರಭಾರ ಮುಖ್ಯಸ್ಥರಾಗಿ ಗೀತಿಕಾ ಶ್ರೀವಾಸ್ತವ್‌ ಅವರನ್ನು ನೇಮಿಸಲಾಗಿದೆ.

               ಈ ಮೂಲಕ ಆ ಹುದ್ದೆಗೇರಿದ ಪ್ರಥಮ ಬಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಗೀತಿಕಾ ಪಾತ್ರರಾಗಿದ್ದಾರೆ.

              2005ರ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿಯಾಗಿರುವ ಗೀತಿಕಾ ಆವರು ಈ ಮೊದಲು ಭಾರತ ವಿದೇಶಾಂಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪಾಕಿಸ್ತಾನದಲ್ಲಿನ ಭಾರತೀಯ ಹೈಕಮಿಷನ್‌ ಕಚೇರಿಯ ರಾಯಭಾರ ವ್ಯವಹಾರಗಳ ಪ್ರಭಾರ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಎಂ ಸುರೇಶ್‌ ಕುಮಾರ್‌ ಅವರು ದೆಹಲಿಗೆ ಮರಳುವ ಸಾಧ್ಯತೆ ಇರುವ ಕಾರಣ ಅವರ ಹುದ್ದೆಗೆ ಗೀತಿಕಾ ಅವರನ್ನು ನೇಮಕ ಮಾಡಲಾಗಿದೆ.

ಈ ಹುದ್ದೆಯು ಉಪರಾಯಭಾರಿ ಹುದ್ದೆಯಾಗಿದ್ದು, ಹಲವು ಜವಾಬ್ದಾರಿಗಳನ್ನು ಹೊಂದಿರುತ್ತದೆ. ವಿದೇಶದಲ್ಲಿ ರಾಯಭಾರಿ ಅಥವಾ ಹೈಕಮಿಷನರ್‌ ಅವರ ಅನುಪಸ್ಥಿತಿಯಲ್ಲಿ ರಾಜತಾಂತ್ರಿಕ ಕೆಲಸಗಳನ್ನು ತಾತ್ಕಾಲಿಕವಾಗಿ ನೋಡಿಕೊಳ್ಳಬೇಕಾಗುತ್ತದೆ.

               ಕಾಮನ್‌ವೆಲ್ತ್‌ ದೇಶಗಳ ನಡುವಿನ ರಾಜತಾಂತ್ರಿಕತೆ ಕಾರ್ಯಾಚರಣೆಗಳನ್ನು 'ಹೈಕಮಿಷನ್‌' ಎಂದೂ, ಕಾಮನ್‌ವೆಲ್ತ್‌ ಅಲ್ಲದ ದೇಶಗಳ‌ನ್ನು 'ರಾಯಭಾರಿ'ಗಳೆಂದು ಕರೆಯಲಾಗುತ್ತದೆ.

                  ಗೀತಿಕಾ ಅವರು ಈಗಾಗಲೇ ಚೀನಾ‌ದ ರಾಯಭಾರ ಕಚೇರಿಯಲ್ಲಿ 2007ರಿಂದ 2009ರವರೆಗೆ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಕೋಲ್ಕತ್ತದಲ್ಲಿ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ, ವಿದೇಶಾಂಗ ಸಚಿವಾಲಯದಲ್ಲಿ ಹಿಂದೂ ಮಹಾಸಾಗರ ವಿಭಾಗದ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಕಾರ್ಯಾಚರಣೆಗೆ ಇಸ್ಲಾಮಾಬಾದ್‌ ಮತ್ತು ನವದೆಹಲಿಯಲ್ಲಿ 2019ರಿಂದ ಯಾರೂ ಹೈಕಮಿಷನರ್‌ಗಳಿಲ್ಲ.

                 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನವು ಹೈಕಮಿಷನ್ ಸ್ಥಾನಮಾನವನ್ನು ಕೆಳಗಿಳಿಸಿತ್ತು. ಹೀಗಾಗಿ ಅಜಯ್‌ ಬಿಸಾರಿಯಾ ಅವರು ಇಸ್ಲಾಮಾಬಾದ್‌ನಲ್ಲಿದ್ದ ಕೊನೆಯ ಭಾರತೀಯ ಹೈಕಮಿಷನರ್‌ ಆಗಿದ್ದಾರೆ.

               ಈ ಹಿಂದೆ ಭಾರತೀಯ ಮಹಿಳೆಯರು ಪಾಕಿಸ್ತಾನದಲ್ಲಿ ಕೆಲಸ ಮಾಡಿದ್ದಾರೆ ಆದರೆ ಇಷ್ಟು ಉನ್ನತ ಹುದ್ದೆಗೆ ಯಾರೂ ಹೋಗಿರಲಿಲ್ಲ ಎನ್ನುತ್ತವೆ ವರದಿಗಳು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries