ಬದಿಯಡ್ಕ : ನೀರ್ಚಾಲು ಸಮೀಪದ ಕುಂಟಿಕಾನ ಎಎಸ್‍ಬಿ ಶಾಲೆಯಲ್ಲಿ ಭಾನುವಾರ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಆಶ್ರಯದಲ್ಲಿ ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪರ್ಯಟನೆಯ 6ನೇ ಸರಣಿ ಕಾರ್ಯಕ್ರಮವು ಆóಷಾಢ ಮಾಸದಲ್ಲಿ ಮಕ್ಕಳ ಮನದಲ್ಲಿ ಹೊಸ ಉತ್ಸಾಹವನ್ನು ಮೂಡಿಸಿತು. ನಿವೃತ್ತ ಶಿಕ್ಷಕ, ಹಿರಿಯ ಸಾಹಿತಿ ಭಾಸ್ಕರ ಅಡ್ವಳ ಅವರು ಆಟಿ ಆಚರಣೆಯ ಕುರಿತು ವಿಶೇಷ ಕಾರ್ಯಾಗಾರ ನಿರ್ವಹಿಸಿದರು. ಈ ಕಾರ್ಯಾಗಾರದಲ್ಲಿ ಮಕ್ಕಳಿಂದ ವಿವಿಧ ಬೌದ್ಧಿಕ ಹಾಗೂ ಶಾರೀರಿಕ ಚಟುವಟಿಕೆಗಳನ್ನು ನಡೆಸಲಾಯಿತು. ಮಕ್ಕಳ ಜೀವನ ಶೈಲಿಯ ರೂಪೀಕರಣ ಹಿತ ವ್ಯಕ್ತಿತ್ವ ವಿಕಸನವಾಗುವಂತಹಾ ಅನೇಕ ವಿಚಾರಗಳನ್ನು ಮಕ್ಕಳಿಗೆ ತಿಳಿಸಿದರು. ಕನ್ನಡದ ಪದಗಳನ್ನು ಬಳಕೆ ಮಾಡಿ ವಾಕ್ಯಗಳÀ ರಚನೆ, ಪರಸ್ಪರ ಸಂಬಂಧಿಸಿದ ಎರಡು ಅಥವಾ ಮೂರು ವಾಕ್ಯಗಳನ್ನು ಸೂಕ್ತ ಶಬ್ಧಗಳನ್ನು ಸೇರಿಸಿ, ಜೋಡಿಸಿ ಅರ್ಥವತ್ತಾದ ಟಿಪ್ಪಣಿ ಬರೆಯುವ ರೀತಿ, ಮಕ್ಕಳಿಂದಲೇ ಹಾಡುಗಳನ್ನು ರಚಿಸಿ ಗಾಯನ ಹಾಗೂ ನೃತ್ಯ, ಸ್ಥಳದಲ್ಲೇ ಆಶುಕವನಗಳನ್ನು ರಚಿಸಿ, ಅದನ್ನು ಸುಶ್ರಾವ್ಯವಾಗಿ ಹಾಡುವÀ ಬಗ್ಗೆ ಹೇಳಿಕೊಟ್ಟರು.
ಒಟ್ಟು ಕಾರ್ಯಕ್ರಮದಲ್ಲಿ ಮಕ್ಕಳು ಬಹಳ ಸಂಭ್ರಮದಿಂದ ಭಾಗವಹಿಸಿ ಕುಣಿದಾಡಿದರು. ಈ ಸಂದರ್ಭದಲ್ಲಿ ಆಟಿ ತಿಂಗಳ ವಿಶೇಷ ದೈವವಾದ ಆಟಿಕೆಳೆಂಜನ ಪಾಡ್ದನ ಸಹಿತ ಪ್ರಾತ್ಯಕ್ಷಿಕೆ ನಡೆಯಿತು. ಆಟಿಕೆಳೆಂಜನ ಮಹತ್ವದ ಕುರಿತಾಗಿ ಕುಂಟಿಕಾನ ಶಾಲಾ ಮುಖ್ಯ ಶಿಕ್ಷಕ ವೆಂಕಟರಾಜ ವಿ ಹಾಗೂ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ಅವರು ಮಕ್ಕಳಿಗೆ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಭಾಸ್ಕರ ಅಡ್ವಳ ಅವರನ್ನು ಸ್ಮರಣೆಕೆ ನೀಡಿ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ ಪುಂಡೂರು ಪ್ರಭಾವತಿ ಕೆದಿಲಾಯರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಂಘಟಕ ಕುಂಟಿಕಾನ ವೆಂಕಟೇಶ್ವರ ಭಟ್, ಕುಂಟಿಕಾನ ಶಾಲಾ ಪ್ರಬಂಧಕ ಶಂಕರನಾರಾಯಣ ಶರ್ಮ, ನಿವೃತ್ತ ಶಿಕ್ಷಕ ದಿನೇಶ್ ಬೊಳುಂಬು, ಪತ್ರಕರ್ತ ವಿರಾಜ್ ಅಡೂರು, ಶಿಕ್ಷಕ ರಾಜೇಶ್ ಎಸ್ ಉಬ್ರಂಗಳ ಮೊದಲಾದವರು ಭಾಗವಹಿಸಿದ್ದರು, ಆಟಿಯ ವಿಶೇಷವಾಗಿ ಕಾರ್ಯಾಗಾರದಲ್ಲಿ ಪತ್ರೋಡೆ ಖಾದ್ಯವನ್ನು ತಯಾರಿಸಿ ನೆರೆದವರಿಗೆ ಹಂಚಲಾಯಿತು.