ಕಾಸರಗೋಡು: ನೀಲೇಶ್ವರ ಸನಿಹದ ಬಂಗಳಂ ಹಾಲಿನ ಸೊಸೈಟಿ ಸನಿಹದ ಜಮಾಅತ್ ಕ್ವಾಟ್ರಸ್‍ನಲ್ಲಿ ವಾಸಿಸುತ್ತಿರುವ ಸೆಬಾಸ್ಟಿಯನ್-ದೀಪಾ ದಂಪತಿ ಪುತ್ರ ಆಲ್ಬಿನ್ ಸೆಬಾಸ್ಟಿಯನ್(17)ಬಂಗಳಂ ಕರಿಕುಂಡ್‍ನ ಜಲಾಶಯದ ನೀರಲ್ಲಿ ಮುಳುಗಿ ಮೃತಪಟ್ಟಿದ್ದು, ಈತನ ಮ್ರತದೇಹ ಕಂಡು ನೆರೆಮನೆಯ ಮಹಿಳೆಯೂ ಕುಸಿದು ಬಿದ್ದಿದ್ದಾರೆ.
ತಕ್ಷಣ ಇವರನ್ನು ನೀಲೇಶ್ವರದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ನೀಲೇಶ್ವರ ಬಂಗಳಂ ದಿ. ಕುಞÂಕಣ್ಣನ್ ಅವರ ಪತ್ನಿ ವಿಲಾಸಿನಿ(65)ಮೃತಪಟ್ಟ ಮಹಿಳೆ, ಸೋಮವಾರ ತಾಯಿ ಜತೆ ಜಲಾಶಯ ಬಳಿ ತೆರಳಿದ್ದ ಆಲ್ಬಿನ್ ತಾಯಿ ನಿಂತಿದ್ದಂತೆ ನೀರಿಗಿಳಿದು ಈಜಲು ಆರಂಭಿಸಿದ್ದನು. ಅಲ್ಪ ಹೊತ್ತಿನಲ್ಲಿ ನೀರಲ್ಲಿ ಮುಳುಗೇಳುತ್ತಿರುವುದನ್ನು ಕಂಡ ತಾಯಿ ಆಸುಪಾಸಿನವರನ್ನು ಕರೆದು ನೀರಲ್ಲಿ ಹುಡುಕಾಡಿದರೂ ಪತ್ತೆ ಸಾಧ್ಯವಾಗಿರಲಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ತಡರಾತ್ರಿ ವರೆಗೆ ಹುಡುಕಾಟ ನಡೆಸಿದ್ದು, ಮಂಗಳವಾರ ಹುಡುಕಾಟ ಮುಂದುವರಿಸಿ, ಬಾಲಕನ ಮೃತದೇಹ ಪತ್ತೆಹಚ್ಚಲಾಗಿದೆ. ನೀಲೇಶ್ವರ ಉಪ್ಪಿಲಕೈ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‍ವನ್ ವಿದ್ಯಾರ್ಥಿಯಾಗಿದ್ದನು. ಮೂಲತ: ಆಲಪ್ಪುಳ ನಿವಾಸಿಯಾಗಿದ್ದ ಆಲ್ಬಿನ್ ಹೆತ್ತವರು 14ವರ್ಷಗಳ ಹಿಂದೆ ನೀಲೇಶ್ವರ ಆಗಮಿಸಿದ್ದರು. ನೀಲೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.