ಕಾಸರಗೋಡು: ಕಾಸರಗೋಡಿನಲ್ಲಿ ಸಮಥ9 ಕವಿಗಳು ಅನೇಕರಿದ್ದರೂ ಅಖಿಲ ಕನಾ9ಟಕ ಮಟ್ಟದಲ್ಲಿ ಅವರನ್ನು ಗುರುತಿಸುವ, ಅವರ ಕೃತಿಗಳನ್ನು ಜನರಿಗೆ ತಲುಪಿಸುವ ಕೆಲಸ ಆಗುತ್ತಿಲ್ಲ ಎಂದು ಹಿರಿಯ ಸಾಹಿತಿ , ಕವಿ ಶ್ರೀಕೃಷ್ಣಯ್ಯ ಅನಂತಪುರ ಅವರು ಅಭಿಪ್ರಾಯಪಟ್ಟರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಕಾಸರಗೋಡಿನ ಕಛೇರಿಯಲ್ಲಿ ಸುಗಮ -ಭಕ್ತಿ- ಭಾವ ಜನಪದ ಗೀತೆಗಳ ರಾಗ ಸಂಯೋಜನೆ,ಪ್ರಚಾರ, ಕವಿಗಳ ಗಾಯಕರ ಪ್ರೋತ್ಸಾಹಕ್ಕಾಗಿ ಪ್ರತ್ಯೇಕ ಘಟಕ ರೂಪಕರಿಸುವುದರ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡಿನ ಕನ್ನಡಿಗರ ಸಾಹಿತ್ಯವನ್ನು ಅನಾವರಣ ಗೊಳಿಸುವುದರ ಜತೆಗೆ ರಾಗ ಸಂಯೋಜಿಸಿ ಹಾಡಲು ಇದೇ ಮೊದಲ ಬಾರಿಗೆ ಸಮಿತಿಯ ರೂಪೀಕರಣ ಆಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಅವರು ಸಂತಸವನ್ನು ವ್ಯಕ್ತ ಪಡಿಸಿದರು.
ರಂಗಚಿನ್ನಾರಿಯ ನಿರ್ದೇಶಕ, ಚಿತ್ರನಟ,ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ ಗಾಯಕರಿಗೆ ಮತ್ತು ಹಿನ್ನೆಲೆ ಸಂಗೀತಕ್ಕೆ ಪ್ರಾಮುಖ್ಯತೆ ಕೊಡುವ ಮೂಲಕ ಕಾಸರಗೋಡಿನಲ್ಲಿ ಪ್ರತಿಭಾವಂತರನ್ನು ಗುರುತಿಸಿ ವೇದಿಕೆ ಒದಗಿಸುವುದೇ ಈ ನೂತನ ಘಟಕದ ಉದ್ದೇಶ ಎಂದು ಹೇಳಿದರು.
ಸಾಂಸ್ಕøತಿಕ ಮತ್ತು ಸಾಮಾಜಿಕ ಸ0ಸ್ಥೆ ರಂಗಚಿನ್ನಾರಿಯ ಹೊಸ ಘಟಕಕ್ಕೆ ಈ ಮೊದಲು ನಾರಿ ಚಿನ್ನಾರಿ ಎಂಬ ಹೆಸರನ್ನು ನಿರ್ದೇಶಿಸಿದ ಲೇಖಕಿ ವಿಜಯಲಕ್ಷ್ಮಿ ಶಾನುಭೋಗ್ ಸ್ವರಚಿನ್ನಾರಿ ಎಂಬ ಹೆಸರನ್ನೂ ಸೂಚಿಸಿದರು. ಚರ್ಚಿಸಿ ಪ್ರಸ್ತುತ ಹೆಸರನ್ನು ಅಂಗೀಕರಿಸಲಾಯಿತು. ಹಿರಿಯ ಸಂಗೀತಜ್ಞ ಕಲ್ಮಾಡಿ ಸದಾಶಿವ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಘಟಂ ವಿದ್ವಾನ್ ಈಶ್ವರ್ ಭಟ್ ಶುಭಹಾರೈಸಿದರು.
ಸಭೆಯಲ್ಲಿ ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ಗೌರವಾಧ್ಯಕ್ಷರಾಗಿ ಶ್ರೀಕೃಷ್ಣಯ್ಯ ಅನಂತಪುರ, ಕಾರ್ಯಾಧ್ಯಕ್ಷರಾಗಿ ಪುರುμÉೂೀತ್ತಮ್ ಕೊಪ್ಪಲ್, ಉಪಾಧ್ಯಕ್ಷರಾಗಿ ಜಯಶ್ರೀ ಅನಂತಪುರ , ಶ್ರೀಧರ್ ರೈ , ಬಬಿತಾ ಆಚಾರ್ಯ , ಪ್ರಧಾನ ಕಾರ್ಯದರ್ಶಿಯಾಗಿ ಕಿಶೋರ್ ಪೆರ್ಲ, ಜತೆ ಕಾರ್ಯದರ್ಶಿಗಳಾಗಿ ಪ್ರಭಾಕರ್ ಮಲ್ಲ, ರತ್ನಾಕರ್ ಒಡಂಗಲ್, ಪ್ರತಿಜ್ಞಾ ರಂಜಿತ್, ಕೋಶಾಧಿಕಾರಿಯಾಗಿ ಸತ್ಯನಾರಾಯಣ ಐಲ, ಗೌರವ ಸಲಹೆಗಾರಾಗಿ ಕಲ್ಮಾಡಿ ಸದಾಶಿವ ಆಚಾರ್ಯ, ಈಶ್ವರ ಭಟ್ , ರಾಧಾ ಮುರಳೀಧರ್ ಅವರು ಆಯ್ಕೆಯಾದರು. ವಿಜಯಲಕ್ಷ್ಮಿ ಶಾನುಭೋಗ್, ಸರ್ವಮಂಗಳ , ಉμÁ ಈಶ್ವರ್ ಭಟ್, ಅಕ್ಷತಾ ಪ್ರಕಾಶ್ ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳಿಗೆ ಇನ್ನಷ್ಟು ಸದಸ್ಯರನ್ನು ಹೊಸ ಘಟಕಕ್ಕೆ ಸೇರಿಸುವ ಹೊಣೆಗಾರಿಕೆಯನ್ನು ನೀಡಲಾಯಿತು. ಸೆ. 9 ರಂದು ಸ್ವರ ಚಿನ್ನಾರಿಯ ಉದ್ಘಾಟನೆಯನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಯಿತು. ಬಬಿತಾ ರವಿಚಂದ್ರ ಪ್ರಾರ್ಥನೆ ಹಾಡಿದರು. ರಂಗಚಿನ್ನಾರಿಯ ಅಂಗಸಂಸ್ಥೆ ನಾರಿ ಚಿನ್ನಾರಿಯ ಪ್ರಧಾನ ಕಾರ್ಯದರ್ಶಿ ದಿವ್ಯಾಗಟ್ಟಿ ಪರಕ್ಕಿಲ ಸ್ಥಾಗತಿಸಿ, ನೂತನ ಸಮಿತಿ ಸ್ವರಚಿನ್ನಾರಿಯ ಪ್ರಧಾನ ಕಾರ್ಯದರ್ಶಿ ಕಿಶೋರ್ ಪೆರ್ಲ ವಂದಿಸಿದರು.