ಕಾಸರಗೋಡು: ಯುವ ಪೀಳಿಗೆಯನ್ನು ಮದ್ಯ, ಮಾದಕ ದ್ರವ್ಯ ವ್ಯಸನದಿಂದ ಪಾರು ಮಾಡಲು ಸಮಾಜ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಸ್ಥಳೀಯಾಡಳಿತ-ಅಬಕಾರಿ ಖಾತೆ ಸಚಿವ ಎಂ.ಬಿ.ರಾಜೇಶ್ ತಿಳಿಸಿದ್ದಾರೆ. ಅವರು ಬಳ್ಳಾ ಈಸ್ಟ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಾದಕ ವ್ಯಸನ ವಿಮುಕ್ತ ಮಿಷನ್ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸುವ ಶಿಬಿರದ ರಾಜ್ಯ ಮಟ್ಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳನ್ನು ಪತ್ತೆ ಮಾಡುವುದುರ ಜತೆಗೆ ಅವರಿಗೆ ಕಾನೂನು ಕ್ರಮಗಳ ಬಗ್ಗೆ ಬೋಧನೆ ನೀಡಿ ಶಿಬಿರ ಚಟುವಟಿಕೆಗಳನ್ನು ತೀವ್ರಗೊಳಿಸುವ ಗುರಿಯನ್ನು ಹೊಂದಿದೆ. ಮಾದಕ ದ್ರವ್ಯದ ಪಿಡುಗಿಗೆ ಮಕ್ಕಳನ್ನು ಗುರಿಯಾಗಿಸಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ರಾಜಗೋಪಾಲನ್, ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತ, ಪಂಚಾಯತ್ ಅಸೋಸಿಯೇಶನ್ ಜಿಲ್ಲಾ ಕಾರ್ಯದರ್ಶಿ ಎ.ಪಿ.ಉಷಾ, ಕಾಞಂಗಾಡು ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಲತಾ, ಕೆ.ಪ್ರಭಾವತಿ, ಕೌನ್ಸಿಲರ್‍ಗಳಾದ ಎನ್. ಅಶೋಕ ಕುಮಾರ್, ಕೆ.ವಿ. ಮಾಯಾಕುಮಾರಿ, ಕೆ ಸುಶೀಲಾ, ಎನ್. ಇಂದಿರಾ, ಟಿ.ವಿ ಸುಜಿತ್, ಉತ್ತರ ವಲಯದ ಜಂಟಿ ಅಬಕಾರಿ ಆಯುಕ್ತ ಕೆ. ಪ್ರೇಮ್ ಕೃಷ್ಣ, ಆಸ್ಪತ್ರೆ ಅಧೀಕ್ಷಕರು, ನೀಲೇಶ್ವರಂ ತಾಲೂಕು. ಎ.ಟಿ.ಮನೋಜ್, ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್. ನಂದಿಕೇಶನ್, ಜಿಲ್ಲಾ ವಾರ್ತಾ ಅಧಿಕಾರಿ ಮಧುಸೂಧನ್ ಮುಂತಾದವರು ಉಪಸ್ಥಿತರಿದ್ದರು. ಅಬಕಾರಿ ಹೆಚ್ಚುವರಿ ಆಯುಕ್ತ ಡಿ. ರಾಜೀವ್ ಸ್ವಾಗತಿಸಿದರು. ಕಾಸರಗೋಡು ಉಪ ಅಬಕಾರಿ ಆಯುಕ್ತ ಪಿ.ಕೆ.ಜಯರಾಜ್ ವಂದಿಸಿದರು. ತದನಂತರ ಮಾದಕ ವಸ್ತು ಪಿಡುಗಿನ ವಿರುದ್ಧ ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾಯಿತು.