ಕುಂಬಳೆ: ಪುತ್ತಿಗೆ ಪಂಚಾಯಿತಿ ಮಟ್ಟದ ಬಂಟರ ಆಟಿದ ಕೂಟ ಕಾರ್ಯಕ್ರಮವು ಆ. 13ರಂದು ಬೆಳಗ್ಗೆ 11ಕ್ಕೆ ಪುತ್ತಿಗೆ ಶಾಲಾ ವಠಾರದಲ್ಲಿ ಜರುಗಲಿದೆ. ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ವಕೀಲ ಐ. ಸುಬ್ಬಯ್ಯ.ರೈ ಇಚ್ಲಂಪಾಡಿ, ಪುತ್ತಿಗೆ ಪಂಚಾಯಿತಿ ಸಮಿತಿ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಮಂಗಳೂರು ಮಾತೃ ಸಂಘದ ಅದ್ಯಕ್ಷೆ ಆಶಾ ಜ್ಯೋತಿ ರೈ, ಗಿರಿಧರ ಶೆಟ್ಟಿ ನೈಮೊಗೆರ್ ಬಾರಿಕೆ,ಚಂದ್ರಹಾಸ ರೈ ಪೆರಡಾಲ ಗುತ್ತು, ಡಾ. ವಿದ್ಯಾ ಮೋಹನ್ ದಾಸ್ ರೈ ಬೆಳ್ಳೂರು, ಡಾ.ಮಮತಾ ಶೆಟ್ಟಿ ಮೊದಲಾದವರು ಭಾಗವಹಿಸುವರು. ಬೆಳಗ್ಗೆ 10ರಿಂದ ಸಾಂಸ್ಕøತಿಕ ಕಾರ್ಯಕ್ರಮ,ರಸಮಂಜರಿ, ಆಟಿ ಕಳಂಜ ಕುಣಿತ ಮುಂತಾದ ಕಾರ್ಯಕ್ರಮ ಜರುಗಲಿರುವುದು.