ಕಾಸರಗೋಡು : ಜಿಲ್ಲಾ ಖಾಸಗಿ ಮೋಟಾರು ನೌಕರರ ಕ್ಷೇಮಾಭಿವೃದ್ಧಿ ಸಹಕಾರ ಸಂಘದ ನೂತನ ಯೋಜನೆಯನ್ವಯ ವಾಹನಗಳಿಗಾಗಿ ಸಾಲ ವಿತರಣೆ ಮತ್ತು ಕೀಲಿಕೈ ಹಸ್ತಾಂತರ ಸಮಾರಂಭ ಕಾಸರಗೋಡಿನಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಎ. ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್.ಎ ನೆಲ್ಲಿಕುನ್ ಅವರು ಫಲಾನುಭವಿಗಳಿಗೆ ವಾಹನದ ಕೀಲಿಕೈ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿಸಹಕಾರಿ ಸಂಘದ ಸಹಾಯಕ ನಿಬಂಧಕ (ಸಾಮಾನ್ಯ) ಎ.ರವೀಂದ್ರ ಆಶಯ ಭಾಷಣ ಮಾಡಿದರು. ಸೆಕ್ರೆಟರಿಫಾರಂ ಅಧ್ಯಕ್ಷ ವಿನೋದ್ ಕುಮಾರ್ ಪಿ.ಕೆ, ಸಂಘಟನೆ ನಿರ್ದೇಶಕರಾದ ಇ.. ಚಂದ್ರನ್ ನಾಯರ್, ಹಂಸ ಕೆ, ಪೆÇನ್ನಪ್ಪನ್ ಎ, ಸುಧಾಮಣಿ ಉಪಸ್ಥಿತರಿದ್ದರು. ಬಳಗದ ಕಾರ್ಯದರ್ಶಿ ಬಿಂದು ಸಿ.ಪಿ ಸ್ವಾಗತಿಸಿದರು. ವೇಣುಗೋಪಾಲನ್ .ಇ ವಂದಿಸಿದರು.