ಕಣ್ಣೂರು: ಕಣ್ಣೂರು ರೈಲು ನಿಲ್ದಾಣದಲ್ಲಿ ಭಾರೀ ಮಾದಕ ದ್ರವ್ಯ ಬೇಟೆ ನಡೆಸಲಾಗಿದೆ. ಇಲ್ಲಿಂದ ನಿನ್ನೆ ಆರು ಕೆಜಿ ಗಾಂಜಾ ಪತ್ತೆಯಾಗಿದೆ. ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್‍ಫಾರ್ಮ್ ಬಳಿ ಗಾಂಜಾವನ್ನು ಬಚ್ಚಿಟ್ಟಿದ್ದರು.
ಆರ್‍ಪಿಎಫ್ ಮತ್ತು ಕಣ್ಣೂರು ರೇಂಜ್ ಅಬಕಾರಿ ಅಧಿಕಾರಿಗಳು ಜಂಟಿಯಾಗಿ ಗಾಂಜಾವನ್ನು ಪತ್ತೆ ಮಾಡಿದ್ದಾರೆ.
ರಾಜ್ಯದಲ್ಲಿ ಗಾಂಜಾ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂಬ ವರದಿ ಹೊರಬೀಳುತ್ತಿರುವ ಮಧ್ಯೆ ಅಲ್ಲಲ್ಲ್ಲಿ ಗಾಂಜಾಬೇಟೆ ಬಿರುಸುಗೊಂಡಿದೆ. ಸೋಮವಾರ ಬೆಂಗಳೂರಿನಿಂದ ತ್ರಿಶೂರ್‍ಗೆ ಕೊರಿಯರ್ ಮೂಲಕ ಗಾಂಜಾ ಕಳುಹಿಸಿದ ಘಟನೆಯಲ್ಲಿ ಯುವಕ ಸಿಕ್ಕಿಬಿದ್ದಿದ್ದ. ಘಟನೆಯಲ್ಲಿ ಕುನ್ನಂಕುಳಂ ಮೂಲದ ವೈಶಾಖ್ ಎಂಬಾತನನ್ನು ಬಂಧಿಸಲಾಗಿದೆ. ಬೆಂಗಳೂರಿನಿಂದ ಕೊರಿಯರ್ ಮೂಲಕ ಗಾಂಜಾವನ್ನು ಕಳುಹಿಸಿ ಕೊಟ್ಟಿದ್ದು, ಕೊರಿಯರ್ ಏಜೆನ್ಸಿಗೆ ಗಾಂಜಾ ಖರೀದಿಸಲು ಬಂದಾಗ ಬಂಧಿಸಲಾಯಿತು.