ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇಗುಲದಲ್ಲಿ ಹಾಗೂ ನಾಗಬನ ಸನ್ನಿಧಿಯಲ್ಲಿ ವಿಶೇಷ ಸೇವಾ ಕಾರ್ಯಕ್ರಮ ಧಾರ್ಮಿಕ ಆಚರಣೆಯನ್ನು ತನು, ನಾಳಿಕೇರ ಜಲಧಾರೆಯೊಂದಿಗೆ ಆರಾಧನೆಗೈದು ಶ್ರದ್ಧಾ, ಭಕ್ತಿಯಿಂದ ನಾಗರಪಂಚಮಿ ಪರ್ವವನ್ನು ಸಾಮೂಹಿಕವಾಗಿ ಆಚರಿಸಲಾಯಿತು.
ನಾಗರಪಂಚಮಿ ಪರ್ವದ ಅಂಗವಾಗಿ ಉಷಃಕಾಲ ಪೂಜೆಯ ಬಳಿಕ ಶ್ರೀ ಕ್ಷೇತ್ರದ ಮೊಕ್ತೇಸರ ವೇದಮೂರ್ತಿ ಯಸ್. ವಾಸುದೇವ ಭಟ್ ಅವರ ನೇತೃತ್ವದಲ್ಲಿ ಲಕ್ಷ್ಮೀಶ ವಿ. ಹಾಗೂ ಶಿವರಾಜ್ ಅವರ ಸಹಕಾರದೊಂದಿಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ನಾಗಭೂಷಣನಿಗೆ ಪ್ರೀತ್ಯರ್ಥವಾಗಿ ಪಂಚಾಮೃತಭಿμÉೀಕ, ರುದ್ರಾಭಿಷೇಕಗಳನ್ನು ನೆರವೇರಿಸಿ ವಿಶೇಷ ರೀತಿಯ ಫಲ-ಪುಷ್ಪಗಳೊಂದಿಗೆ ಆರಾಧಿಸಿ ಶ್ರೀ ಸದಾಶಿವ ದೇವರಲ್ಲಿ ಊರಲ್ಲಿ ರೋಗ ಮುಕ್ತಗೊಳಿಸಲು ಪ್ರಾರ್ಥಿಸಲಾಯಿತು.
ನಾಗವನದಲ್ಲಿ ಪರ್ವದ ಪ್ರಯುಕ್ತ ವಿಶೇಷವಾಗಿ ಕ್ಷೀರ, ದಧಿ, ಘ್ರತ, ಮಧು, ಶರ್ಕರಗಳೆಂಬ ‘ಐದು’ ದ್ರವ್ಯಗಳಿಂದ ಪಂಚಾಮೃತ ಅಭಿμÉೀಕ, ಸೀಯಾಳಾಭಿಷೇಕ, ಕ್ಷೀರಾಭಿಷೇಕದೊಂದಿಗೆ ತನುಧಾರೆ ಅರ್ಚನೆಗಳು ನಡೆಯಿತು.