ಬದಿಯಡ್ಕ: ಶಂಕುಸ್ಥಾಪನೆಗೊಂಡು 11 ವರ್ಷ ಕಳೇದರೂ ಪೂರ್ಣ ಪ್ರಮಾಣದಲ್ಲಿ ಕಾರ್ಯಪ್ರವೃತ್ತವಾಗದ ಉಕ್ಕಿನಡ್ಕದಲ್ಲಿರುವ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜಿ ದುರವಸ್ಥೆಯನ್ನು ಪ್ರತಿಭಟಿಸಿದ ಜನಕೀಯ ಚಳವಳಿಗೆ ಕೇರಳ ಹಿರಿಯ ನಾಗರಿಕರ ವೇದಿಕೆಯು ಸಂಪೂರ್ಣ ಬೆಂಬಲವನ್ನು ಘೋಷಿಸಿದೆ.
ಸಾಮಾಜಿಕ ಕಾರ್ಯಕರ್ತೆ ದಯಾಬಾಯಿಯವರ ನೇತೃತ್ವದಲ್ಲಿ ವೈದ್ಯಕೀಯ ಕಾಲೇಜಿನ ಪರಿಸರದಲ್ಲಿ ಜರಗಿದ ಏಕದಿನ ಉಪವಾಸ ಸತ್ಯಾಗ್ರಹದಲ್ಲಿ ವೇದಿಕೆಯ ಅಧ್ಯಕ್ಷ ಪೆರ್ಮುಖ ಈಶ್ವರ ಭಟ್, ಕಾರ್ಯದರ್ಶಿ ಶಂಕರನಾರಾಯಣ ಭಟ್, ಹಿರಿಯರಾದ ಪಿಲಿಂಗಲ್ಲು ಕೃಷ್ಣ ಭಟ್, ಉದ್ಯಮಿ ನಾರಾಯಣ ಚೆಟ್ಟಿಯಾರ್, ರಾಮಚಂದ್ರ ಚೆಟ್ಟಿಯಾರ್, ಪಿ.ಜಿ.ಚಂದ್ರಹಾಸ ರೈ ಪಾಲ್ಗೊಂಡಿದ್ದರು.