ನವದೆಹಲಿ: ಆನ್‌ಲೈನ್ ಪಾವತಿ ವೇದಿಕೆ ಭಾರತದ ಯುಪಿಐ ವ್ಯವಸ್ಥೆಯ ಬಗ್ಗೆ ಜರ್ಮನಿಯ ರಾಯಭಾರ ಕಚೇರಿಯು ಭಾನುವಾರ ಪ್ರಶಂಸಿಸಿದ್ದು, ಜರ್ಮನಿಯ ಸಚಿವರೊಬ್ಬರು ತರಕಾರಿ ಅಂಗಡಿಯಲ್ಲಿ ಯುಪಿಐ ಮೂಲಕ ಹಣ ಪಾವತಿಸಿರುವ ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಂಚಿಕೊಂಡಿದೆ.

ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಇಲ್ಲಿನ ತರಕಾರಿ ಅಂಗಡಿಯಲ್ಲಿ ತಾವು ಖರೀದಿಸಿದ ಪದಾರ್ಥಗಳಿಗೆ ಯುಪಿಐ ಮೂಲಕ ಹಣ ಪಾವತಿ ಮಾಡಿದ್ದಾರೆ.
'ಭಾರತದ ಯಶೋಗಾಥೆ ಎಂದರೆ ಡಿಜಿಟಲ್ ಮೂಲಸೌಕರ್ಯ. ಯುಪಿಐ ಪ್ರತಿಯೊಬ್ಬರಿಗೂ ಸೆಕೆಂಡ್‌ಗಳಲ್ಲಿ ವಹಿವಾಟು ಮಾಡಲು ಅನುವು ಮಾಡಿಕೊಡುತ್ತದೆ. ಲಕ್ಷಾಂತರ ಭಾರತೀಯರು ಇದನ್ನು ಬಳಸುತ್ತಿದ್ದಾರೆ. ಜರ್ಮನಿಯ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಯುಪಿಐ ಪಾವತಿಗಳ ಸರಳ ವಿಧಾನದ ಸ್ವಅನುಭವ ಪಡೆದಿದ್ದು, ಈ ವಿಧಾನವು ಅವರನ್ನು ತುಂಬಾ ಸೆಳೆದಿದೆ' ಎಂದು ರಾಯಭಾರ ಕಚೇರಿಯು ಮೆಚ್ಚುಗೆ ವ್ಯಕ್ತಪಡಿಸಿದೆ.