ತಿರುವನಂತಪುರಂ: ರಾಜ್ಯದಲ್ಲಿ ಪ್ಲಸ್ ಟು ಕಲಿಕೆಯ ಜೊತೆಗೆ ವಾಹನ ಚಾಲನಾ ಮಾರ್ಗದರ್ಶನ ನೀಡಲು ಚಿಂತನೆ ನಡೆದಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ.
ಪ್ಲಸ್ ಟು ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರಿಗೆ ಅದೇ ವೇಳೆ ಲರ್ನಿಂಗ್ ಪರೀಕ್ಷೆಗಳಿಲ್ಲದೆ ನೇರವಾಗಿ ವಾಹನ ಚಲಾವಣಾ ಪರವಾನಿಗೆ(ಡ್ರೈವಿಂಗ್ ಲೈಸೆನ್ಸ್) ಪಡೆಯುವ ಯೋಜನೆಯು ಪರಿಗಣನೆಯಲ್ಲಿದೆ. ಇದರ ಭಾಗವಾಗಿ ಹೈಯರ್ ಸೆಕೆಂಡರಿ ವಿಭಾಗದ ಪಠ್ಯಕ್ರಮದಲ್ಲಿ ಈ ವಿಷಯಗಳನ್ನು ಸೇರಿಸುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿಯೇ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ಯೋಜನೆ ರೂಪಿಸಲು ಚಿಂತನೆ ನಡೆದಿದೆ. ಪುಸ್ತಕಗಳನ್ನು ಸಿದ್ಧಪಡಿಸಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಪ್ಲಸ್ ಟು ಪಾಸಾದವರಿಗೆ ಶಿಕ್ಷಣ ಪ್ರಮಾಣ ಪತ್ರದ ಜತೆಗೆ ಕಲಿಕಾ ಪ್ರಮಾಣ ಪತ್ರ ನೀಡಲು ಯೋಜಿಸಲಾಗಿದೆ. ಪ್ಲಸ್ ಒನ್ ಮತ್ತು ಪ್ಲಸ್ ಟು ತರಗತಿಗಳಲ್ಲಿ ರಸ್ತೆ ಕಾನೂನು ಮತ್ತು ಸಂಚಾರ ಕಾನೂನು ಸೇರಿದಂತೆ ಲರ್ನಿಂಗ್ ಪ್ರ್ರಮಾಣಪತ್ರಕ್ಕೆ ಅಗತ್ಯವಿರುವ ತರಗತಿಗಳನ್ನು ಆಯೋಜಿಸಲಾಗುತ್ತದೆ. ಪಠ್ಯಕ್ರಮದಲ್ಲಿ ಸೇರಿಸುವುದರಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡುತ್ತದೆ ಮತ್ತು ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು.
ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಲ್ಲಿ ಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. ರಸ್ತೆ ಶಿμÁ್ಟಚಾರ ಮತ್ತು ಚಿಹ್ನೆಗಳು ಪಠ್ಯಕ್ರಮದಲ್ಲಿ ಒಳಗೊಂಡಿವೆ. ಇದರಿಂದ ಈಗಿರುವ ಅಕ್ರಮಗಳನ್ನು ಕಡಿಮೆ ಮಾಡಲು ಹಾಗೂ ಕಲಿಕಾ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಗಳಲ್ಲಿ ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಲಿದೆ.