ಕೊಚ್ಚಿ: ಆನ್‍ಲೈನ್ ಮಾಧ್ಯಮ ಮರುನಾಡನ್ ಮಲಯಾಳಿ ವಾಹಿನಿಯ ಮಾಲೀಕ ಶಾಜನ್ ಸ್ಕಾರಿಯಾ ರನ್ನು ಪೋಲೀಸರು ಬಂಧಿಸಿರುವ ಕ್ರಮಕ್ಕೆ ಕೋರ್ಟ್ ಟೀಕಿಸಿದೆ.
ಎರ್ನಾಕುಳಂ ಜಿಲ್ಲಾ ಸೆಷನ್ಸ್ ಕೋರ್ಟ್ ಪೋಲೀಸರನ್ನು ಟೀಕಿಸಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿರುವ ಹಂತದಲ್ಲಿಯೇ ಬಂಧನ ನಡೆದಿದ್ದು, ಪೋಲೀಸರು ಕಾಲಾವಕಾಶ ಕೇಳಿದ್ದರಿಂದ ಅರ್ಜಿ ಪರಿಗಣಿಸಲು ವಿಳಂಬವಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಕಾನೂನು ವಿಧಾನಗಳನ್ನು ದುರುಪಯೋಗಪಡಿಸಿಕೊಂಡು ಪೋಲೀಸರು ತರಾತುರಿಯಲ್ಲಿ ಬಂಧಿಸುತ್ತಿದ್ದಾರೆ ಎಂದು ನ್ಯಾಯಾಲಯ ಟೀಕಿಸಿದೆ.
ನಿಲಂಬೂರು ಪೋಲೀಸ್ ಠಾಣೆಗೆ ಧಾರ್ಮಿಕ ದ್ವೇಷ ಹುಟ್ಟು ಹಾಕಲು ಯತ್ನಿಸಿದ ಪ್ರಕರಣದಲ್ಲಿ ಹಾಜರಾಗಿದ್ದ ಶಾಜನ್ ಸ್ಕಾರಿಯಾ ರನ್ನು ವಿಚಾರಣೆ ವೇಳೆ ಮತ್ತೊಂದು ಪ್ರಕರಣದಲ್ಲಿ ಬಂಧಿಸಲಾಗಿದೆ. ತೃಕ್ಕಾಕರದಲ್ಲಿ ದಾಖಲಾದ ಪೋರ್ಜರಿ ಪ್ರಕರಣದಲ್ಲಿ ಬಂಧಿಸಲಾಗಿದೆ. ನಾಗರಿಕ ಗಲಭೆ ಸೃಷ್ಟಿಸಲು ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕಾಗಿ ಶಾಜಜನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಘಟನೆಯಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.