HEALTH TIPS

ಕಡಿಮೆ ಬೆಲೆಗೆ ಮದ್ಯ ಪೂರೈಸದಿದ್ದಕ್ಕೆ ಇಡೀ ಬಾರ್​ ಧ್ವಂಸಗೊಳಿಸಿದ ಯುವಕರು! ಸಿಬ್ಬಂದಿ ಮೇಲೂ ಹಲ್ಲೆ

                 ತ್ರಿಶೂರ್ ಕಡಿಮೆ ಬೆಲೆಗೆ ಮದ್ಯ ಪೂರೈಕೆ ಮಾಡಲಿಲ್ಲ ಅಂತ ಆಕ್ರೋಶಗೊಂಡ ಯುವಕರಿಬ್ಬರು ಇಡೀ ಬಾರ್​ ಅನ್ನು ಧ್ವಂಸಗೊಳಿಸಿರುವ ಘಟನೆ ಕೇರಳದ ಕೊಟ್ಟಪಾಡಿಯಲ್ಲಿ ನಡೆದಿದೆ.

               ಇರಿಂಗಪುರಂ ಮೂಲದ ಅಭಿಷೇಕ್​ ಅಲಿಯಾಸ್​ ಕುರುಡಿ ಮತ್ತು ಕನ್ನರಾಥ್​ ಶ್ರೀಹರಿ ಎಂಬುವರನ್ನು ಗುರುವಾಯೂರು ಪೊಲೀಸರು ಬಂಧಿಸಿದ್ದಾರೆ.

                 ಬಾರ್​ ಅನ್ನು ಧ್ವಂಸ ಮಾಡಿದ್ದಲ್ಲದೆ, ಬಾರ್​ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಈ ಘಟನೆ ಕಳೆದ ರಾತ್ರಿ 1.30ರ ಸುಮಾರಿಗೆ ಕೊಟ್ಟಪಾಡಿಯಲ್ಲಿರುವ ಫೋರ್ಟ್​ ಗೇಟ್​ ಬಾರ್​ನಲ್ಲಿ ನಡೆದಿದೆ.

                                                    ಸಿಬ್ಬಂದಿ ಮೇಲೂ ಹಲ್ಲೆ

                   ಬಂಧಿತ ಇಬ್ಬರು ಸೇರಿ ನಾಲ್ವರು ಬಾರ್​ಗೆ ಆಗಮಿಸಿ, 140 ರೂಪಾಯಿ ಮೌಲ್ಯದ ಒಂದು ಪೆಗ್ ಮದ್ಯವನ್ನು 100 ರೂಪಾಯಿಗೆ ಕೊಡುವಂತೆ ಬೇಡಿಕೆ ಇಟ್ಟರು. ಆದರೆ, ಬಾರ್​ ಸಿಬ್ಬಂದಿ ಇದನ್ನು ನಿರಾಕರಿಸಿದರು. ಬಳಿಕ ಅಲ್ಲಿಂದು ಹೊರಟು ಹೋದ ಅವರು ಕೆಲ ಸಮಯದ ಬಳಿಕ ಪೈಪ್​ಗಳು ಮತ್ತು ಮರದ ದೊಣ್ಣೆಯನ್ನು ಹಿಡಿದು ಮತ್ತೆ ಬಾರ್​ಗೆ ಆಗಮಿಸಿದರು. ಬಳಿಕ ಬಾರ್ ಮುಂದೆ ಇದ್ದ ಕಿಟಕಿ ಗಾಜುಗಳನ್ನು ಹೊಡೆದು ಹಾಕಲು ಆರಂಭಿಸಿದರು. ಈ ವೇಳೆ ಅವರನ್ನು ತಡೆಯಲು ಹೋದ​ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿಡಿಗೇಡಿಗಳು ಧ್ವಂಸ ಮಾಡಿದ್ದರಿಂದ 2 ಲಕ್ಷ ರೂ. ಮೌಲ್ಯದ ಹಾನಿಯಾಗಿದೆ ಎಂದು ಬಾರ್​ ಮಾಲೀಕ ದೂರು ನೀಡಿದ್ದಾರೆ. ಘಟನೆ ಬಳಿಕ ಎಸ್ಕೇಪ್​ ಆಗಿದ್ದ ಆರೋಪಿಗಳನ್ನು ಚಟ್ಟುಕಲಂನಲ್ಲಿ ಬಂಧಿಸಲಾಗಿದ್ದು, ಇಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries