ಪೆರ್ಲ : ಕಾರು ಅಪಘಾತದಲ್ಲಿ ಗಂಭೀರ ಗಾಐಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪೆರ್ಲ ಸನಿಹದ ಮಣಿಯಂಪಾರೆ ಮನ್ನಂಗಳ ನಿವಾಸಿ ಜಾನು ನಾಯ್ಕ್-ಸರಸ್ವತೀ ದಂಪತಿ ಪುತ್ರ ರೋಶನ್ ಎನ್.ಜೆ(29)ಶುಕ್ರವಾರ ಮೃತಪಟ್ಟಿದ್ದಾರೆ. ಬೆಂಗಳೂರು ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಖಾಸಗಿ ಸಂಸ್ಥೆಯಲ್ಲಿ ನೌಕರನಾಗಿ ದುಡಿಯುತ್ತಿದ್ದ ಇವರು ಮಂಗಳೂರಿನಿಂದ ಕಾರಿನಲ್ಲಿ ಊರಿಗೆ ಆಗಮಿಸುತ್ತಿದ್ದಾಗ ಅಡ್ಕಸ್ಥಳದಲ್ಲಿ ಕಾರು ಡಿವೈಡರ್‍ಗೆ ಡಿಕ್ಕಿಯಾಗಿ ಮಗುಚಿಬಿದ್ದ ಪರಿಣಾಮ ರೋಶನ್ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ವಿಧಿ ಕಸಿದದ್ದು ಮನೆಯ ಏಕ ಗಂಡು ಸಂತಾನವನ್ನು....
ದೂರವಾಣಿ ಸಂಪರ್ಕ ಕೇಂದ್ರೀಯ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದ ನೀರೋಳ್ಯ ಜಾನು ನಾಯ್ಕ- ಸರಸ್ವತಿ ದಂಪತಿಗಳ ಎರಡು ಹಣ್ಮಕ್ಕಳಲ್ಲಿ ಈತ ಏಕಮಾತ್ರ ಪುತ್ರನಾಗಿದ್ದ. ಈತನ ಸಹೋದರಿ ರಾಜಶ್ರೀ ಹತ್ತು ವರ್ಷಗಳ ಹಿಂದೆ ಉಡುಪಿಯಲ್ಲಿ ವಿದ್ಯಾಭ್ಯಾಸಗೈಯುತ್ತಿರುವ ಸಂದರ್ಭ ರಸ್ತೆ ದಾಟುತ್ತಿದ್ದ ವೇಳೆ ರಸ್ತೆ ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ಇದೀಗ ಮತ್ತೊಂದು ಇಂತಹದೆ ದುರಂತ ಈ ಕುಟುಂಬವನ್ನು ಬೇಟೆಯಾಡಿರುವುದು ಶೋಕ ಸಾಗರ ಸೃಷ್ಠಿಸಿದೆ. ಎರಡು ವರ್ಷಗಳ ಹಿಂದೆಯಷ್ಟೆ ವಿವಾಹಿತನಾಗಿದ್ದ ಈತ ತಾಯಿ ಸರಸ್ವತಿ ,ಪತ್ನಿ ಸಂಜನಾ, ಒಂದೂವರೆ ವರ್ಷದ ಮಗಳು ವಿಹಾ,ಸಹೋದರಿರಾದ ರಜಿಶಾ,ರವಿನಾ ಎಂಬವರನ್ನಗಲಿದ್ದಾರೆ.
ಓಚ್ಚು ಇನ್ನು ನೆನಪು ಮಾತ್ರ....
ರೋಶನ್ ಎಂಬ ಅಧಿಕೃತ ದಾಖಲೆಯ ಹೆಸರನ್ನು ಹೊಂದಿದ್ದರು ಜನರು ಪ್ರೀತಿಯಿಂದ ಓಚ್ಚು ಎಂಬುದಾಗಿ ಕರೆಯುತ್ತಿದ್ದರು. ನಾಡಿನಲ್ಲಿ ಎಲ್ಲರೊಡನೆ ಬಹಳ ಆತ್ಮೀಯವಾಗಿ ವರ್ತಿಸುತ್ತಿದ್ದ ಈತ ಅಪಾರ ಬಂಧು ಬಳಗವನ್ನು ಹೊಂದಿದ್ದ. ಈಗ ಆಧುನಿಕ ತಲೆಮಾರಿನ ಯುವಕರಂತೆ ಐಟಿ ಬಿಟಿ ಕೆಲಸಕ್ಕೆ ಆಸೆ ಪಡದೆ ಈತ ಮನೆಯಿಂದ ಕಂಪೆನಿಯೊಂದಕ್ಕೆ ವರ್ಕ್ ಪ್ರಂ ಹೋಮ್ ಕೆಲಸ ನಿರ್ವಹಿಸುವ ನಡುವೆ ಮನೆಯವರ ಜತೆಗೂಡಿ ಹೈನುಗಾರಿಕೆ,ಕೃಷಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ.ನಿತ್ಯವೂ ಶೇಣಿ ಹಾಲುತ್ಪಾದಕ ಸಂಘಕ್ಕೆ ಹಾಲು ತರುತ್ತಿದ್ದ. ಎಲ್ಲಾ ಜಾತಿ ಮತದರಲ್ಲೂ ಏಕಭಾವದೊಂದಿ ಬಹಳ ಗೌರವ ಹಾಗೂ ಆಪ್ತಭಾವದಿಂದಿರುತ್ತಿದ್ದ ಈತನ ಅಗಲುವಿಕೆಯಿಂ ನಾಡು ಶೋಕತಪ್ತವಾಗಿದೆ. ಈತನ ಅಗಲುವಿಕೆಗೆ ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಪಂ.ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ, ಬ್ಲೋಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ.ಟೀಮ್ ಛತ್ರಪತಿ ಮಣಿಯಂಪಾರೆ ಸಂತಾಪ ವ್ಯಕ್ತಪಡಿಸಿದ್ದಾರೆ.