ಕಾಸರಗೋಡು: ಚೆಂಗಳ ಸರ್ವೀಸ್ ಕೋ ಆಪರೇಟಿವ್ ಬ್ಯಾಂಕಿನ ನೂತನ ಆಡಳಿತ ಮಂಡಳಿ ಸದಸ್ಯರ ಆಯ್ಕೆ ನಡೆಯಿತು. ಸಮಿತಿ ನೂತನ ಅಧ್ಯಕ್ಷರಾಗಿ ಕೆ.ಕುಞÂಕೃಷ್ಣನ್ ನಾಯರ್ ಅವರನ್ನು ಆಯ್ಕೆ ಮಾಡಲಾಯಿತು. ಅಹ್ಮದ್ ಕಬೀರ್.ಸಿ.ಎ ಉಪಾಧ್ಯಕ್ಷ, ಅಬ್ಬಾಸ್.ಕೆಎ, ಅಬ್ದುಲ್ ಮುತ್ತಲಿಬ್, ಅಬೂಬಕರ್, ಗಂಗಾಧರನ್.ಕೆ, ಅಸ್ಮಾ.ಕೆ, ಪ್ರಮೀಳಾ ಮತ್ತು ಯಮುನಾ ಅವರು ನಿರ್ದೇಶಕರಾಗಿಯೂ ಆಯ್ಕೆಯಾದರು.
ಈ ಸಂದರ್ಭ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು. ಮುಸ್ಲಿಂ ಲೀಗ್ ಪಂಚಾಯತ್ ಅಧ್ಯಕ್ಷ ಹಾಗೂ ಯುಡಿಎಫ್ ಅಧ್ಯಕ್ಷ ಜಲೀಲ್ ಎರುತುಂಕಾಡವ್ ಅಧ್ಯಕ್ಷತೆ ವಹಿಸಿದ್ದರು. ನೂತನವಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ವಿ.ಜೇಮ್ಸ್ ಹೊದಗಿ ಉಪಸ್ಥಿತರಿದ್ದರು. ಇಸ್ಮಾಯಿಲ್ ಬಿ.ಎ ಸ್ವಾಗತಿಸಿದರು.