ಕುಂಬಳೆ : ಅಂಗಡಿಮೊಗರು ಸಾಲಾ ವಿದ್ಯಾರ್ಥಿ, ಪೆರಾಲ್‍ಕಣ್ಣೂರು ನಿವಾಸಿ ದಿ. ಅಬ್ದುಲ್ಲ-ಸಫಿಯಾ ದಂಪತಿ ಪುತ್ರ ಫರಾಸ್(19)ಸಾವಿಗೆ ಪೊಲೀಸರೇ ಕಾರಣ ಎಂದು ಮುಸ್ಲಿಂಲೀಗ್ ಆರೋಪಿಸಿದ್ದು, ಘಟನೆಗೆ ಕಾರಣಕರ್ತರಾದ ಪೊಲೀಸರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಕುಂಬಳೆ ಪೊಲೀಸ್ ಠಾಣೆ ಎದುರು ಮುಸ್ಲಿಂಲೀಗ್ ಮಂಡಲ ಸಮಿತಿ ವತಿಯಿಂದ ಧರಣಿ ನಡೆಸಲಾಯಿತು.
ಮುಸ್ಲಿಂಲೀಗ್ ಮುಖಂಡ, ಶಾಸಕ ಎ.ಕೆ.ಎಂ ಅಶ್ರಫ್ ಧರಣಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಕಾರನ್ನು ಕಲೊಂಈಟರ್ ವರೆಗೆ ಹಿಂಬಾಲಿಸಿ ತೆರಳಿರುವುದು ಅಪಘಾತಕ್ಕೆ ಕಾರಣವಾಗಿದೆ. ಪೊಲೀಸರ ಕರ್ತವ್ಯಲೋಪದಿಂದ ವಿದ್ಯಾರ್ಥಿಯೊಬ್ಬನ ಜೀವ ನಷ್ಟಗೊಂಡಿದೆ. ಘಟನೆಗೆ ಕಾರಣರಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ, ಪ್ರಬಲ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಮುಸ್ಲಿಂಲೀಗ್, ಮಂಡಲ, ಪಂಚಾಯಿತಿ ಸಮಿತಿ ಮುಖಂಡರು ಪಾಲ್ಗೊಂಡಿದ್ದರು.