ಬದಿಯಡ್ಕ: ಓಣಂ ಹಬ್ಬದ ಪ್ರಯುಕ್ತ ಕಾಸರಗೋಡು ಕೃಷಿಕರ ಕೋ ಓಪರೇಟಿವ್ ಮಾರ್ಕೆಟಿಂಗ್ ಸೊಸೈಟಿ ಪ್ರಧಾನ ಕಚೇರಿ ನೀರ್ಚಾಲು ಇಲ್ಲಿ ಆರಂಭಿಸಲಾದ ತರಕಾರಿ ಮಾರುಕಟ್ಟೆಯ ಉದ್ಘಾಟನೆ ಬುಧವಾರ ಜರಗಿತು. ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಗ್ರಾಹಕರಿಗೆ ತರಕಾರಿ ವಿತರಸಿ ಉದ್ಘಾಟಿಸಿ ಮಾತನಾಡಿ ಕೇರಳದ ಪ್ರಸಿದ್ಧ ಹಬ್ಬವಾದ ಓಣಂ ಸಂಭ್ರಮ ಸಡಗರದಿಂದ ಆಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸೊಸೈಟಿಯ ಮೂಲಕ ತರಕಾರಿ ಮಾರುಕಟ್ಟೆಯನ್ನು ಆರಂಭಿಸಲಾಗಿದ್ದು, ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು. ಕಾರ್ಯದರ್ಶಿ ಅಪ್ಪಣ್ಣ ಬಿ.ಎಸ್. ನಿರೂಪಿಸಿದರು.