ಪೆರ್ಲ: ಎಣ್ಮಕಜೆ ಗ್ರಾ.ಪಂ. ವತಿಯಿಂದ "ಅರವಂ"(ಅವೇಶ) ಎಂಬ ವೈಶಿಷ್ಟ್ಯತೆಯೊಂದಿಗೆ ಶುಕ್ರವಾರ ಓಣಂ ಆಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಪೂಕಳಂ ಸ್ಪರ್ಧೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಬಡ್ಸ್ ಶಾಲಾ ಮಕ್ಕಳೊಂದಿಗೆ ಮಧ್ಯಾಹ್ನದ ಓಣಂ ಸದ್ಯ(ಔತಣ ಕೂಟ) ದಲ್ಲಿ ಪಂಚಾಯತಿಯ ವಿವಿಧ ಇಲಾಖೆಗಳವರು ಪಾಲ್ಗೊಂಡರು. ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಈ ಸಂದರ್ಭ ಪಂಚಾಯತಿ ಪ್ರತಿನಿಧಿಗಳಿಗೆ, ಉದ್ಯೋಗಿಗಳಿಗೆ, ಕುಟುಂಬಶ್ರೀ, ಹಸಿರು ಕ್ರಿಯಾಸೇನೆ, ಅಂಗನವಾಡಿ ಕಾರ್ಯಕರ್ತೆಯರಿಗೆ ವಿವಿಧ ಸ್ಪರ್ಧೆ ಹಾಗೂ ಕಲಾ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಡಾ.ಝಹನಾಸ್ ಹಂಸಾರ್, ಬ್ಲಾಕ್ ಪಂಚಾಯಿತಿ ಸದಸ್ಯ ಕೆ.ಪಿ.ಅನಿಲ್ ಕುಮಾರ್, ಎಣ್ಮಕಜೆ ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್, ಸೌದಾಭಿ ಹನೀಫ್, ಜಯಶ್ರೀ ಕುಲಾಲ್, ಹಾಗೂ ಪಂಚಾಯತಿ ಸದಸ್ಯರಾದ ಶಶಿಧರ, ಇಂದಿರಾ ಎಚ್, ರಾಮಚಂದ್ರ, ನರಸಿಂಹ ಪೂಜಾರಿ, ರಮ್ಲ, ಕುಸುಮಾವತಿ, ಉಷಾ ಕುಮಾರಿ, ಝರಿನಾ ಮುಸ್ತಾಫ, ರೂಪಾವಾಣಿ ಆರ್.ಭಟ್, ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಉಪಾಧ್ಯಕ್ಷೆ ಶಶಿಕಲಾ ಸ್ವರ್ಗ, ಸಹಾಯಕ ಕೃಷಿ ಅಧಿಕಾರಿ ಜಯಶ್ರೀ, ಮಾಜಿ ಉಪಾಧ್ಯಕ್ಷರಾದ ಆಯಿಷಾ ಎ.ಎ, ಸಿದ್ಧಿಕ್ ಹಾಜಿ ಖಂಡಿಗೆ ಮೊದಲಾದವರು ಪಾಲ್ಗೊಂಡರು. ನವಾಸ್ ಮತ್ರ್ಯ ನಿರೂಪಿಸಿದರು.