ಕಾಸರಗೋಡು: ಓಣಂ ಅಂಗವಾಗಿ ಖಾದಿಯ ಪ್ರಚಾರ ಮತ್ತು ಮಾರುಕಟ್ಟೆ ಪ್ರಾದೇಶಿಕ ಮೇಳಗಳಿಗೆ ಕಾಸರಗೋಡಿನ ಅಜಾನೂರಿನಲ್ಲಿ ಚಾಲನೆ ನೀಡಲಾಯಿತು. ಕಾಸರಗೋಡು ಜಿಲ್ಲಾ ಖಾದಿ ಗ್ರಾಮೋದ್ಯೋಗ ಪ್ರಾಂಗಣದಲ್ಲಿ ಆರಂಭಗೊಂಡ ಕಚೇರಿಯನ್ನು ಅಜಾನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಶೋಭಾ ಉದ್ಘಾಟಿಸಿದರು.
ಅಭಿವೃದ್ಧಿ ಸ್ಥಾಯಿ ಅಧ್ಯಕ್ಷೆ ಮಾಯಾ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯೆ ಸುನೀತಾ ಮೊದಲ ಮಾರಾಟ ನಡೆಸಿದರು. ಪವಿತ್ರ,ಬಾಲಕೃಷ್ಣ ಅವರು ಮೊದಲ ಗ್ರಾಹಕರಾಗಿ ಬಟ್ಟೆ ಸ್ವೀಕರಿಸಿದರು. ಖಾದಿ ಮಂಡಳಿ ನಿರ್ದೇಶಕ ಟಿ.ಸಿ.ಮಾಧವನ್ ನಂಬೂದಿರಿ, ಗ್ರಾ.ಪಂ.ಅಧಿಕಾರಿ ವಿ.ಶಿಬು ಉಪಸ್ಥಿತರಿದ್ದರು. ಜಿಲ್ಲಾ ಯೋಜನಾಧಿಕಾರಿ ಎಂ.ಆಯಿಷಾ ಸ್ವಾಗತಿಸಿ, ಸಹಾಯಕ ವ್ಯವಸ್ಥಾಪಕಿ ಅಪರ್ಣಾ ವಂದಿಸಿದರು.
ಇಂದಿನಿಂದ ಖಾದಿ ಮೇಳ:
ಖಾದಿ ಓಣಂ ಮೇಳ ಆ. 8ರಿಂದ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆಯಲಿದೆ. ಆ.9ರಿಂದ 11ರ ವರೆಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ, 17, 18ರಂದು ಕೇಂದ್ರ ವಿಶ್ವವಿದ್ಯಾಲಯ ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾದಿ ಪ್ರಚಾರ ಮತ್ತು ಮಾರುಕಟ್ಟೆ ಮೇಳಗಳನ್ನು ಆಯೋಜಿಸಲಾಗುವುದು.