ತಿರುವನಂತಪುರಂ: ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವದ ಸಂಕೇತವಾಗಿ ‘ಶಿಕ್ಷಕ’(ಟೀಚರ್) ಎಂದು ಸಂಬೋಧಿಸಬೇಕು ಎಂಬ ಆದೇಶವನ್ನು ಮಕ್ಕಳ ಹಕ್ಕು ಆಯೋಗದÀ ಆದೇಶವನ್ನು ತಿರಸ್ಕರಿಸಲಾಗಿದೆ.
ಆಯೋಗದ ಆದೇಶವನ್ನು ಗುಣಮಟ್ಟ ಸುಧಾರಣೆ ಕಾರ್ಯಕ್ರಮ (ಕ್ಯೂಐಪಿ) ಉಸ್ತುವಾರಿ ಸಮಿತಿ ತಿರಸ್ಕರಿಸಿದೆ. ರಾಜ್ಯ ಮಕ್ಕಳ ಹಕ್ಕು ಆಯೋಗವು ಶಿಕ್ಷಕರನ್ನು ಲಿಂಗ ಭೇದವಿಲ್ಲದೆ ‘ಶಿಕ್ಷಕ’ ಎಂದು ಕರೆಯುವಂತೆ ಸೂಚಿಸಿತ್ತು.
ಮಕ್ಕಳು ತಮ್ಮ ಶಿಕ್ಷಕರನ್ನು ಅವರು ಬಯಸಿದಂತೆ ಸಂಬೋಧಿಸಬಹುದು ಎಂದು ಕ್ಯೂಐಪಿ ಹೇಳಿದೆ. ಈ ನಿಟ್ಟಿನಲ್ಲಿ ಸರಕಾರ ಯಾವುದೇ ವಿಶೇಷ ಸೂಚನೆ ನೀಡಬಾರದು ಎಂದು ಕ್ಯೂಐಪಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮೇಡಂ, ಸರ್, ಮಾಸ್ಟರ್ ಮತ್ತು ಮಿಸ್ ಎಂದು ಕರೆಯುವುದನ್ನು ತಪ್ಪಿಸಬೇಕು ಎಂಬುದು ಮಕ್ಕಳ ಹಕ್ಕು ಆಯೋಗದ ಶಿಫಾರಸು. ಶಿಕ್ಷಕರನ್ನು ಸಂಬೋಧಿಸಲು ಅತ್ಯಂತ ಸೂಕ್ತವಾದ ಪದವೆಂದರೆ 'ಶಿಕ್ಷಕ'(ಟೀಚರ್) ಎಂಬುದೇ ಸಮರ್ಪಕವಾಗಿದೆ. ಈ ಬಗ್ಗೆ ಸೂಚನೆ ನೀಡುವಂತೆ ಆಯೋಗವು ಸಾರ್ವಜನಿಕ ಶಿಕ್ಷಣ ನಿರ್ದೇಶಕರನ್ನು ಕೇಳಿತ್ತು. ಆದರೆ, ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಹಾಗೂ ಶಿಕ್ಷಕರ ಸಂಘಟನೆಗಳು ಇದರ ವಿರುದ್ಧ ಹರಿಹಾಯ್ದವು.