ಕಾಸರಗೋಡು: 'ಬೇಟಿ ಬಚಾವೋ ಬೇಟಿ ಪಠಾವೋ' ಯೋಜನೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಶಾಲಾ ಶಿಕ್ಷಕರಿಗೆ 'ಪೋಕ್ಸೋ ಕಾಯ್ದೆ'ಬಗ್ಗೆ ತರಬೇತಿ ಕರ್ಯಕ್ರಮ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ ಕೈನಿಕರ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಮಟ್ಟದ ಐಸಿಡಿಎಸ್ ಕೋಶದ ಹಿರಿಯ ಅಧೀಕ್ಷಕ ಅಮರನಾಥ ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಶು ಸಂರಕ್ಷಣಾಧಿಕಾರಿ ಶೈನಿ ಐಸಾಕ್ ಸ್ವಾಗತಿಸಿದರು. ಕಿರಿಯ ಅಧೀಕ್ಷಕ ಟಿ.ಟಿ.ಫೈಸಲ್ ವಂದಿಸಿದರು. ಪೋಕ್ಸೋ ಕಾಯ್ದೆ ಬಗ್ಗೆ ವಕೀಲ ವಿನಯ್ ಮಂಗಾಟ್ ತರಗತಿ ನಡೆಸಿದರು.