ಮುಳ್ಳೇರಿಯ: ಇರಿಯಣ್ಣಿ ಜಿವಿಎಚ್‍ಎಸ್‍ಎಸ್ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಎಪ್ಪತ್ತೇಳು ವರ್ಷಗಳ ಸ್ವಾತಂತ್ರ್ಯವನ್ನು ಆಧರಿಸಿ ಪ್ರೌಢಶಾಲಾ ವಿದ್ಯಾರ್ಥಿಗಳು ಮಾಡಿದ ತ್ರಿವರ್ಣ ಪ್ರದರ್ಶನ ಆಕರ್ಷಕವಾಗಿತ್ತು. ಪ್ರಾಚಾರ್ಯ ಸಜೀವನ್ ರಾಷ್ಟ್ರಧ್ವಜಾರೋಹಣ ಮಾಡಿದರು. ಪಿಟಿಎ ಅಧ್ಯಕ್ಷ ಬಿ.ಎಂ.ಪ್ರದೀಪ್ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ವಿಎಚ್‍ಎಸ್‍ಇ ಪ್ರಾಂಶುಪಾಲ ಸುಚೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತಿ ಹಸಿರು ಕ್ರಿಯಾಸೇನೆ ಸದಸ್ಯ ಸರಿತಾ ಮತ್ತು ರಜಿನಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಹಸಿರು ವಿದ್ಯಾಲಯ-ಸುಚಿತ್ವ ವಿದ್ಯಾಲಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮಾಸ್ಟರ್ ಸಿದ್ಧಾರ್ಥ್ ಪಿಟೀಲಿನಲ್ಲಿ ರಾಷ್ಟ್ರಗೀತೆ ನುಡಿಸಿದರು. ಶಾಲಾ ನಾಯಕ ಅರುಣ್ ಘೋಷ್ ವಂದಿಸಿದರು. ಎನ್‍ಎಸ್‍ಎಸ್ ಸ್ವಯಂಸೇವಕರ ನೇತೃತ್ವದಲ್ಲಿ ಹೈಯರ್ ಸೆಕೆಂಡರಿ ವಿಭಾಗದ ಮಕ್ಕಳು ಫ್ಲಾಶ್ ಮಾಬ್ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ಮುಖ್ಯಶಿಕ್ಷಕ ಎ.ಎಂ.ಅಬ್ದುಲ್ ಸಲಾಂ ಸ್ವಾಗತಿಸಿ, ಎಸ್‍ಆರ್‍ಜಿ ಸಂಚಾಲಕ ಕೆ. ನಿಮಿಷ ಬಾಬು ವಂದಿಸಿದರು.