ಪೆರ್ಲ: ಅರಿಗಿಲುಂಡ್ ಆಧಾರ್(ಜೊತೆಯಲ್ಲಿದೆ ಆಧಾರ್) ಯೋಜನೆಯ ಮೂರನೇ ಶಿಬಿರ ಭಾನುವಾರ ಎಣ್ಮಕಜೆ ಪಂಚಾಯತಿನಲ್ಲಿ ನಡೆಯಿತು. ಪಂಚಾಯತಿನ ಪರಿಶಿಷ್ಟ ವಿಭಾಗದವರಿಗಾಗಿ ಜಿಲ್ಲೆಯ ಜಿಲ್ಲಾಡಳಿತ ಆಯೋಜಿಸಿದ್ದ ಶಿಬಿರವು ಜಿಲ್ಲಾ ಪರಿಶಿಷ್ಟ ವಿಭಾಗ ಅಭಿವೃದ್ಧಿ ಇಲಾಖೆ, ಅಕ್ಷಯ ಮತ್ತು ಎಣ್ಮಕಜೆ ಪಂಚಾಯತಿನ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು.
ಜಿಲ್ಲಾ ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೈನಿಕರ ಉದ್ಘಾಟಿಸಿದರು. ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಅಧ್ಯಕ್ಷತೆ ವಹಿಸಿದರು. ಪಂಚಾಯತಿ ಕಾರ್ಯದರ್ಶಿ ಪ್ರೇಮಚಂದ್ ಸ್ವಾಗತಿಸಿ, ಟ್ರೈಬಲ್ ವಿಸ್ತರಣಾಧಿಕಾರಿ ಸುಧಾಕರನ್ ಮತ್ತು ಟ್ರೈಬಲ್ ಪ್ರಮೋಟರ್ ರವರ ಅಚ್ಚುಕಟ್ಟಿನ ನಿರ್ವಹಣೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಅಕ್ಷಯ ಬ್ಲಾಕ್ ಸಂಯೋಜಕ ಶ್ರೀನಿವಾಸ ನಾಯ್ಕ್ ಸ್ವರ್ಗ, ಅಶೋಕ ಕೋರಿಕ್ಕಾರ್ ಆಧಾರ್ ರಚನೆಗೆ ನೇತೃತ್ವ ನೀಡಿದರು. ಅಕ್ಷಯ ವ್ಯವಸ್ಥಾಪಕ ವೆಂಕಪ್ಪ ಪ್ರಭು ಪೆರ್ಮುದೆ, ದಿನಕರ ರೈ ಕಾಸರಗೋಡು ಮತ್ತು ಸಿಬಂಧಿವರ್ಗ ಆಧಾರ್ ನಿರ್ವಹಿಸಿದರು.