ವಾರಾಣಸಿ: ಇಲ್ಲಿನ ಜ್ಞಾನವಾಪಿ ಮಸೀದಿ ಆವರಣಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಆರಂಭಿಸಿರುವ ವೈಜ್ಞಾನಿಕ ಸಮೀಕ್ಷೆಯು ಇಂದೂ (ಶನಿವಾರ) ಮುಂದುವರಿಯಿತು.
ವಾರಾಣಸಿ: ಇಲ್ಲಿನ ಜ್ಞಾನವಾಪಿ ಮಸೀದಿ ಆವರಣಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಆರಂಭಿಸಿರುವ ವೈಜ್ಞಾನಿಕ ಸಮೀಕ್ಷೆಯು ಇಂದೂ (ಶನಿವಾರ) ಮುಂದುವರಿಯಿತು.
ಮುಸ್ಲಿಂ ಅರ್ಜಿದಾರರ ಕಡೆಯಿಂದ 5 ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿದರು. ಶುಕ್ರವಾರ ಮುಸ್ಲಿಂ ಪಕ್ಷದಿಂದ ಯಾರೂ ಸಮೀಕ್ಷೆಯಲ್ಲಿ ಭಾಗವಹಿಸಿರಲಿಲ್ಲ.
ಬೆಳಿಗ್ಗೆ ಸಮೀಕ್ಷೆ ಆರಂಭವಾಗಿದ್ದು, ಸಂಜೆ 5 ರ ವರೆಗೆ ನಡೆಯಲಿದೆ. ಸರ್ಕಾರಿ ವಕೀಲ ರಾಜೇಶ್ ಮಿಶ್ರಾ ಅವರು ಕೂಡ ಸಮೀಕ್ಷಾ ಸ್ಥಳದಲ್ಲಿ ಇದ್ದಾರೆ.
ಈ ಮೊದಲೇ ಇದ್ದ ದೇವಾಲಯದ ಮೇಲೆ 17ನೇ ಶತಮಾನದಲ್ಲಿ ಮಸೀದಿ ನಿರ್ಮಿಸಲಾಗಿದೆಯೇ ಎಂಬುದನ್ನು ನಿರ್ಣಯಿಸುವ ಉದ್ದೇಶದ ಈ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಗುರುವಾರ ಅನುಮತಿ ನೀಡಿತ್ತು. ಸಮೀಕ್ಷೆಯನ್ನು ಪೂರ್ಣಗೊಳಿಸಲು ಎಎಸ್‌ಐಗೆ ಸೆಪ್ಟೆಂಬರ್ 4ರ ವರೆಗೆ ಜಿಲ್ಲಾ ನ್ಯಾಯಾಲಯ ಅವಕಾಶ ನೀಡಿದೆ.
ಬೆಳಿಗ್ಗೆ 7ಕ್ಕೆ ಆರಂಭವಾದ ಸಮೀಕ್ಷೆಯನ್ನು ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿ ಸದಸ್ಯರು ಬಹಿಷ್ಕರಿಸಿದ್ದರು. ಶುಕ್ರವಾರದ ಪ್ರಾರ್ಥನೆ ಹಿನ್ನೆಲೆಯಲ್ಲಿ ಮಧ್ಯಾಹ್ನ 12ರಿಂದ 2 ಗಂಟೆ ವರೆಗೆ ಸಮೀಕ್ಷೆಯನ್ನು ಸ್ಥಗಿತಗೊಳಿಸಿದ್ದ ಎಎಸ್‌ಐ ಸಿಬ್ಬಂದಿ, ನಂತರ ಮುಂದುವರಿಸಿದ್ದರು.
43 ಜನರಿರುವ ಎಎಸ್‌ಐ ತಂಡ ಸಮೀಕ್ಷೆ ನಡೆಸುತ್ತಿದೆ.