ತಿರುವನಂತಪುರಂ: ನವೀನ ಪ್ರಚಾರ ಚಟುವಟಿಕೆಗಳ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇರಳ ಪ್ರವಾಸೋದ್ಯಮಕ್ಕೆ ಪೆಸಿಫಿಕ್ ಏμÁ್ಯ ಟ್ರಾವೆಲ್ ಅಸೋಸಿಯೇಷನ್ (ಪಿಎಟಿಎ) 2023 ರ ಚಿನ್ನದ ಪ್ರಶಸ್ತಿಯನ್ನು ನೀಡಿದೆ. ಈ ಪ್ರಶಸ್ತಿಯು ಮಾರ್ಕೆಟಿಂಗ್ ಅಭಿಯಾನ (ರಾಜ್ಯ ಮತ್ತು ನಗರ-ಜಾಗತಿಕ) ವಿಭಾಗಕ್ಕೆ ಲಭಿಸಿದೆ.
ಅಕ್ಟೋಬರ್ 5 ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಇಂಟನ್ರ್ಯಾಷನಲ್ ಎಕ್ಸಿಬಿಷನ್ ಕನ್ವೆನ್ಷನ್ ಸೆಂಟರ್ (ಐಇಸಿಸಿ) ನಲ್ಲಿ 'ಪಿಎಟಿಎ ಟ್ರಾವೆಲ್ ಮಾರ್ಟ್-2023' ಭಾಗವಾಗಿ ಪ್ರಶಸ್ತಿಯನ್ನು ನೀಡಲಾಗುವುದು.
ಕೋವಿಡ್ ನಂತರ, ಪ್ರವಾಸೋದ್ಯಮ ಕ್ಷೇತ್ರಕ್ಕೆ ದೇಶೀಯ ಪ್ರವಾಸಿಗರನ್ನು ಸ್ವಾಗತಿಸುವ ಕೇರಳದ ಅಭಿಯಾನವು ಹೆಚ್ಚು ಗಮನ ಸೆಳೆದಿದೆ. ಮುದ್ರಣ, ರೇಡಿಯೋ, ದೃಶ್ಯ, ಒಒಎಚ್, ಡಿಜಿಟಲ್, ಸಾಮಾಜಿಕ ಮಾಧ್ಯಮ ಮತ್ತು ವೆಬ್É್ಪೂೀರ್ಟಲ್‍ನಂತಹ ವಿವಿಧ ಮಾಧ್ಯಮಗಳ ಮೂಲಕ ಅಭಿಯಾನವು ನಡೆಯಿತು.
ಕೋವಿಡ್ ನಂತರ ಪ್ರವಾಸಿಗರನ್ನು ಆಕಷಿಸಲು ಕೇರಳ ಪ್ರವಾಸೋದ್ಯಮ ನಡೆಸುತ್ತಿರುವ ಪ್ರಚಾರ ಚಟುವಟಿಕೆಗಳಿಗೆ ಇದು ಅತ್ಯುತ್ತಮ ಮನ್ನಣೆಯಾಗಿದೆ ಎಂದು ಪ್ರವಾಸೋದ್ಯಮ ಸಚಿವ ಪಿ.ಎ. ಮುಹಮ್ಮದ್ ರಿಯಾಝ್ ಹೇಳಿದರು. 'ಕಳೆದುಹೋದ ಸಮಯವನ್ನು ಸರಿಮಾಡಿಕೊಳ್ಳಿ, ಕೇರಳಕ್ಕೆ ಬನ್ನಿ' ಎಂಬ ಕಲ್ಪನೆಯೊಂದಿಗೆ ಅಭಿಯಾನವು ಸರಳ ಮತ್ತು ವಿನೂತನವಾಗಿತ್ತು. ಇದು ಭಾರತದ ಪ್ರಮುಖ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾದ ಕೇರಳಕ್ಕೆ ಬರಲು ಪ್ರವಾಸಿಗರನ್ನು ಉತ್ತೇಜಿಸಿದೆ. ಕೇರಳದ ಆಕರ್ಷಕ ನೈಸರ್ಗಿಕ ಸೌಂದರ್ಯದಲ್ಲಿ ತಮ್ಮ ರಜೆಯನ್ನು ಕಳೆಯಲು ಮತ್ತು ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯುವಕರನ್ನು ಆಹ್ವಾನಿಸುವ ಮೂಲಕ ಅಭಿಯಾನವು ಯುವಜನರನ್ನು ಆಕರ್ಷಿಸಲು ಸಾಧ್ಯವಾಯಿತು ಎಂದು ಸಚಿವರು ಹೇಳಿದರು.
ಪ್ರವಾಸಿಗರ ಆಗಮನವನ್ನು ಖಾತ್ರಿಪಡಿಸುವಲ್ಲಿ ಅಭಿಯಾನವು ಪ್ರಮುಖ ಪಾತ್ರ ವಹಿಸಿದ್ದು, ಈ ವರ್ಷ ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಿ ಹೊಸ ದಾಖಲೆ ನಿರ್ಮಿಸಬಹುದು ಎಂದು ಪ್ರವಾಸೋದ್ಯಮ ಕಾರ್ಯದರ್ಶಿ ಕೆ. ಬಿಜು ಹೇಳಿದರು.
ಪ್ರವಾಸೋದ್ಯಮ ನಿರ್ದೇಶಕ ಪಿ.ಬಿ.ನೂಹ್ ಮಾತನಾಡಿ, ದೇಶೀಯ ಪ್ರವಾಸಿಗರು ಹಾಗೂ ವಿಶ್ವದಾದ್ಯಂತ ಕೇರಳದ ಪ್ರಮುಖ ಪ್ರವಾಸೋದ್ಯಮ ಮಾರುಕಟ್ಟೆಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಸಾಧಿಸಲಾಗಿದೆ.
ಕೇರಳ ಪ್ರವಾಸೋದ್ಯಮದ ಪ್ರಚಾರದ ವೀಡಿಯೋ ಯುವ ದಂಪತಿಗಳು ಸಾಹಸಮಯ, ಗ್ರಾಮೀಣ ರಸ್ತೆಯಲ್ಲಿ ಸ್ಕೇಟ್ ಬೋರ್ಡ್‍ನಲ್ಲಿ ಹುಡುಗಿ, ರಸ್ತೆ ಬದಿಯ ಅಂಗಡಿಯಲ್ಲಿ ಪ್ರವಾಸಿಗರು ಚಹಾ ಹೀರುವುದು ಮತ್ತು ಬೆಟ್ಟಗಳ ಪ್ರಶಾಂತ ಪ್ರಕೃತಿಯನ್ನು ಆನಂದಿಸುತ್ತಿರುವ ಕುಟುಂಬವನ್ನು ಒಳಗೊಂಡಿರುವ ಪ್ರಚಾರದ ವೀಡಿಯೊ ಪ್ರವಾಸಿಗರಿಗೆ ಪ್ರಿಯವಾಗಿದೆ. ಇದು ಕೇರಳಕ್ಕೆ ದೇಶಿ ಪ್ರವಾಸಿಗರ ಆಗಮನದ ಮೇಲೆ ಪ್ರಭಾವ ಬೀರಿದೆ ಎಂದು ಅಂದಾಜಿಸಲಾಗಿದೆ.
1984 ರಲ್ಲಿ ಸ್ಥಾಪಿತವಾದ ಪಿಎಟಿಎ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಪ್ರಯಾಣ ಉದ್ಯಮದಿಂದ ಅತ್ಯುತ್ತಮ ಕೊಡುಗೆಗಳಿಗಾಗಿ ಗ್ರಾಂಡ್ ಮತ್ತು ಗೋಲ್ಡ್ ಪ್ರಶಸ್ತಿಗಳನ್ನು ನೀಡುತ್ತದೆ.