ಎರ್ನಾಕುಳಂ: ಕೇರಳದಲ್ಲಿರುವ ವಿದೇಶಿ ಅಂತಾರಾಜ್ಯ ವಂಚನೆ ತಂಡದ ಪ್ರಮುಖ ಕೊಂಡಿ ಪಾಲಕ್ಕಾಡ್ ಮೂಡಲಮಾಡ ಸುನೀಲ್ ದಾಸ್ ಅಥವಾ ‘ಸುನೀಲ್ ಸ್ವಾಮಿ’ ಎಂಬಾತ ಮೈಸೂರು ರಾಜಮನೆತನದ ರಾಜಗುರು ಹೆಸರಿನಲ್ಲಿ 157 ಕೋಟಿ ರೂ. ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.
ಈ ವಂಚನೆಗೆ ಬಲಿಯಾದವರು ಸಾಮಾನ್ಯ ಜನರಿಂದ ಹಿಡಿದು ಸಮುದಾಯದ ಸಾಂಸ್ಕøತಿಕ ರಾಜಕೀಯ ನಾಯಕರು, ಜನಪ್ರತಿನಿಧಿಗಳು, ವಕೀಲರು ಮತ್ತು ಕಾನೂನು ಪರಿಪಾಲಕರವರೆಗೂ ಇದ್ದಾರೆ.
ಪಾಲಕ್ಕಾಡ್ ದೇವಸ್ಥಾನದ ತಂತ್ರಿ ಮತ್ತು ಮೇಲ್ಶಾಂತಿಯರಿಂದ ಹೊರರಾಜ್ಯದಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುವ ತಂಡದ ಬಗ್ಗೆ ಹೊರಜಗತ್ತಿಗೆ ಮೊದಲಿಗೆ ತಿಳಿಯಿತು. ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿರುವವರು ವಂಚನೆಗೆ ಬಲಿಯಾಗಿದ್ದು, ಮಾನನಷ್ಟಕ್ಕೆ ಹೆದರಿ ಬಹಿರಂಗ ಪಡಿಸದ ಕಾರಣ ಸುನೀಲ್ ದಾಸ್ ಅಂತರರಾಜ್ಯ, ಹೊರರಾಜ್ಯ ಸೇರಿದಂತೆ ದಶಕಗಳಿಂದ ವಂಚನೆ ನಡೆಸಲು ಪ್ರೇರೇಪಿಸಿತು.
ಇದೇ ವೇಳೆ, ಪಾಲಕ್ಕಾಡ್ ದೇವಸ್ಥಾನದ ತಂತ್ರಿ ನೇತೃತ್ವದಲ್ಲಿ, ಹಗರಣದ ಸಂತ್ರಸ್ತರು ಕೇಂದ್ರ ಗೃಹ ಸಚಿವಾಲಯ ಮತ್ತು ಅಂತಾರಾಜ್ಯ ಪೋಲೀಸ್ ಮುಖ್ಯಸ್ಥರಿಗೆ ದೂರು ಸಲ್ಲಿಸಿದರು. ಜನರು ಎಚ್ಚರಿಕೆಯಿಂದ ಇರುವಂತೆ ತಿಳಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.