ಬದಿಯಡ್ಕ: ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಅರ್ಧ ಏಕಾಹ ಭಜನಾ ಸೇವೆ ಭಾನುವಾರ ಜರಗಿತು. ಬೆಳಗ್ಗೆ ಸೂರ್ಯೋದಯದ ಸಂದರ್ಭ ಉದ್ಯಮಿ, ರಂಗ ಶರ್ಮ ಉಪ್ಪಂಗಳ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಭಜನೆಯಿಂದ ಮನಸ್ಸಿಗೆ ಶಾಂತಿ, ಸಮಾಧಾನ ಸಿಗುತ್ತದೆ. ಭಜನೆಯ ಮೂಲಕ ಊರಿನ ಜನರಲ್ಲಿ ಒಗ್ಗಟ್ಟು ಮೂಡಿಬರುವುದಲ್ಲದೆ, ಭಜನೆ ವಿಭಜನೆಯನ್ನು ದೂರ ಮಾಡುತ್ತದೆ. ಧಾರ್ಮಿಕ ಚಟುವಟಿಕೆಗಳು ನಿರಂತರ ನಡೆದಾಗ ಸಾತ್ವಿಕ ಚಿಂತನೆಗಳು ಮೂಡಿಬರಲು ಸಾಧ್ಯವಿದೆ ಎಂದರು.
ಶ್ರೀ ಮಹಿಷ ಮರ್ಧಿನಿ ಭಜನಾ ಸಂಘ ಗೋಸಾಡ, ಶ್ರೀಗೋಪಾಲಕೃಷ್ಣ ಭಜನಾ ಸಂಘ ಜಯನಗರ, ಶ್ರೀ ಗೋಪಾಲಕೃಷ್ಣ ಭಜನಾ ಸಂಘ ಕೋಳಿಕ್ಕಾಲು, ಶ್ರೀ ಓಂಕಾರ ಭಜನಾ ಸಂಘ ಮುಳ್ಳೇರಿಯ, ಶ್ರೀಕೃಷ್ಣ ಭಜನಾ ಸಂಘ ಮವ್ವಾರು, ಶ್ರೀ ಕುದ್ರೆಕ್ಕಾಳಿ ಭಜನಾ ಸಂಘ ರತ್ನಗಿರಿ ಬೇಳ, ಶ್ರೀ ದುರ್ಗಾ ಭಜನಾ ಸಂಘ ಅಗಲ್ಪಾಡಿ, ಶ್ರೀ ಅನ್ನಪೂರ್ಣ ಕರ್ಹಾಡ ಭಜನಾ ಸಂಘ ಅಗಲ್ಪಾಡಿ, ಶ್ರೀ ಶಾರದಾಂಬಾ ಭಜನಾ ಸಂಘ ಕೈತೋಡು ಆದೂರು ತಂಡದವರು ಭಜನಾ ಸೇವೆಯಲ್ಲಿ ಪಾಲ್ಗೊಂಡಿದ್ದರು. ಮಂದಿರದ ತಂತ್ರಿಗಳಾದ ಗಣೇಶ ಮರ್ದಂಗೆರೆ, ಅರ್ಚಕ ರವಿ ದಂಡೆಪ್ಪಾಡಿ, ಅಧ್ಯಕ್ಷ ರಾಧಾಕೃಷ್ಣ ನಾಯರ್, ಪವಿತ್ರನ್, ಪ್ರಸಾದ್ ಕುರುಮುಜ್ಜಿ ಹಾಗೂ ಅಪಾರ ಭಕ್ತ ಸಮೂಹ ಉಪಸ್ಥಿತರಿದ್ದರು. ರಮೇಶ್ ಕುರುಮುಜ್ಜಿ ಸ್ವಾಗತಿಸಿ, ನಾರಾಯಣ ವಂದಿಸಿದರು.