ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ವಿವಿಧ ಸ್ನಾತಕೋತ್ತರ ಕೋರ್ಸ್‍ಗಳಿಗೆ ಪ್ರವೇಶಕ್ಕಾಗಿ ನೋಂದಣಿಯನ್ನು ಆಗಸ್ಟ್ 9 ರವರೆಗೆ ವಿಸ್ತರಿಸಲಾಗಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಸಿಯುಇಟಿ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಬೇಕು.
11ರಂದು ರ್ಯಾಂಕ್ ಪಟ್ಟಿ ಪ್ರಕಟಿಸಲಾಗುವುದು. ಪಿಜಿ ಮೊದಲ ಹಂತದ ಪ್ರವೇಶಾತಿ ಆಗಸ್ಟ್ 14 ರಿಂದ 19 ರವರೆಗೆ ನಡೆಯಲಿದೆ. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯವು 26 ಸ್ನಾತಕೋತ್ತರ ಕೋರ್ಸ್‍ಗಳನ್ನು ಹೊಂದಿದೆ. ಅರ್ಥಶಾಸ್ತ್ರ, ಇಂಗ್ಲಿಷ್ ಮತ್ತು ತುಲನಾತ್ಮಕ ಸಾಹಿತ್ಯ, ಭಾಷಾಶಾಸ್ತ್ರ ಮತ್ತು ಭಾಷಾ ತಂತ್ರಜ್ಞಾನ, ಹಿಂದಿ ಮತ್ತು ತುಲನಾತ್ಮಕ ಸಾಹಿತ್ಯ, ಅಂತರರಾಷ್ಟ್ರೀಯ ಸಂಬಂಧಗಳು ಮತ್ತುನೀತಿ ಅಧ್ಯಯನಗಳು, ಸಮಾಜಕಾರ್ಯ, ಶಿಕ್ಷಣ, ಪ್ರಾಣಿಶಾಸ್ತ್ರ, ಜೀವರಸಾಯನಶಾಸ್ತ್ರ, ರಸಾಯನಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಪರಿಸರ ವಿಜ್ಞಾನ, ಜೀನೋಮಿಕ್ ವಿಜ್ಞಾನ, ಭೂವಿಜ್ಞಾನ, ಗಣಿತಶಾಸ್ತ್ರ, ಸಸ್ಯಶಾಸ್ತ್ರ, ಭೌತಶಾಸ್ತ್ರ, ಯೋಗ ಅಧ್ಯಯನಗಳು, ಎಲ್‍ಎಲ್‍ಎಂ, ಸಾರ್ವಜನಿಕ ಆರೋಗ್ಯ, ಎಂ.ಬಿ.ಎ, ಎಂ.ಬಿ.ಎ(ಪ್ರವಾಸೋದ್ಯಮ ಮತ್ತು ಪ್ರಯಾಣ ಟ್ರಾವೆಲ್ ಮ್ಯಾನೇಜ್ಮೆಂಟ್), ಎಂ.ಕಾಂ., ಕನ್ನಡ ಸ್ನಾತಕೋತ್ತರ ಕೋರ್ಸ್‍ಗಳಿಗೆ ಪ್ರವೇಶಾತಿ ಡೆಯಲಿದೆ. ನೋಂದಣಿ ಮತ್ತು ಇತರ ಮಾಹಿತಿಗಾಗಿ www.cukerala.ac.in ಗೆ ಭೇಟಿ ನೀಡಬಹುದಗಿದೆ. ಇಮೇಲ್: admissions@cukerala.ac.in