ನವದೆಹಲಿ: 'ಎಲ್ ನಿನೊ' (El Nino) ಹವಾಮಾನದ ಮಾದರಿಯಿಂದಾಗಿ ಆಗಸ್ಟ್‌ನಲ್ಲಿ ಭಾರತವು ಸರಾಸರಿಗಿಂತ ಕಡಿಮೆ ಮಳೆಯನ್ನು ಹೊಂದುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ಮಾಹಿತಿ ನೀಡಿದ್ದಾರೆ.
ನವದೆಹಲಿ: 'ಎಲ್ ನಿನೊ' (El Nino) ಹವಾಮಾನದ ಮಾದರಿಯಿಂದಾಗಿ ಆಗಸ್ಟ್‌ನಲ್ಲಿ ಭಾರತವು ಸರಾಸರಿಗಿಂತ ಕಡಿಮೆ ಮಳೆಯನ್ನು ಹೊಂದುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ಮಾಹಿತಿ ನೀಡಿದ್ದಾರೆ.
ಆಗಸ್ಟ್‌ನಲ್ಲಿ ದೀರ್ಘಾವಧಿಯ ಮಳೆಯು ಸರಾಸರಿ 92 ಪ್ರತಿಶತ ಎಂದು ಅಂದಾಜಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ವರ್ಚ್ಯುಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ತಿಂಗಳಲ್ಲಿ ರೈತರು ಸಾಮಾನ್ಯವಾಗಿ ಅಕ್ಕಿ, ಜೋಳ, ಹತ್ತಿ, ಸೋಯಾಬೀನ್, ಕಬ್ಬು ಮತ್ತು ಕಡಲೆಕಾಯಿ ಬೆಳೆಗಳನ್ನು ಇತರ ಬೆಳೆಗಳಲ್ಲಿ ನೆಡಲು ಪ್ರಾರಂಭಿಸುತ್ತಾರೆ.
ಸಾಮಾನ್ಯವಾಗಿ ಜೂನ್ 1 ರಿಂದ ಮುಂಗಾರು ಮಳೆಯು ಭಾರತವನ್ನು ಆವರಿಸಿಕೊಳ್ಳಲು ಪ್ರಾರಂಭಿಸುತ್ತದೆ. ಜುಲೈ ಮತ್ತು ಆಗಸ್ಟ್ ಆರಂಭದವರೆಗೂ ಬಿತ್ತನೆ ಕೆಲಸಗಳು ಎಂದಿನಂತೆ ನಡೆಯುತ್ತದೆ. ಭಾರತದ ಅರ್ಧದಷ್ಟು ಕೃಷಿಭೂಮಿಗೆ ನೀರಾವರಿ ಕೊರತೆಯಿರುವುದರಿಂದ ಬೇಸಿಗೆ ಮಳೆಯು ನಿರ್ಣಾಯಕವಾಗಿದೆ. ಜೂನ್‌ನಲ್ಲಿ ಮಳೆ ಸರಾಸರಿಗಿಂತ 10 ಪ್ರತಿಶತದಷ್ಟು ಕಡಿಮೆಯಾಗಿದೆ. ಆದ್ರೆ ಕೆಲವು ರಾಜ್ಯಗಳಲ್ಲಿ, ಮಳೆಯ ಕೊರತೆಯು ಸಾಮಾನ್ಯಕ್ಕಿಂತ 60 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಹೇಳಿದ್ದಾರೆ,