ಕಾಸರಗೋಡು : ಕಾಞಂಗಾಡು ನಗರಸಭೆ, ಕೃಷಿ ಭವನ ಹಾಗೂ ಭತ್ತದ ಗದ್ದೆ ಸಮಿತಿಯ ಜಂಟಿ ನೇತೃತ್ವದಲ್ಲಿ ಕೃಷಿಕರ ದಿನವನ್ನು ಆಚರಿಸಲಾಯಿತು. ಪ್ರತಿ ವರ್ಷ ಸಿಂಹ ಮಾಸದ ಒಂದನೇ ತಾರೀಕನ್ನು ಕೇರಳದಲ್ಲಿ ಕೃಷಿಕರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಬ ಆಯ್ದ ಕೃಷಿಕರು ಮತ್ತು ಕೃಷಿ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಅನಂತಪಳ್ಳ ಶ್ರೀ ಮುತ್ತಪ್ಪ ಮಡಪ್ಪುರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಲತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ ಅವರು ಸನ್ಮಾನಕ್ಕೆ ಆಯ್ಕೆಯಾದ ಕೃಷಿಕರು ಮತ್ತು ಕೃಷಿ ಕಾರ್ಮಿಕರನ್ನು ಸನ್ಮಾನಿಸಿದರು. ನಗರಸಭಾ ಕೃಷಿ ಅಧಿಕಾರಿ ಕೆ.ಮುರಳೀಧರನ್ ಸನ್ಮಾನಿತರಿಗಿರುವ ನಗದು ಪುರಸ್ಕಾರ ವಿತರಿಸಿದರು. ಸಹಾಯಕ ಕೃಷಿ ನಿರ್ದೇಶಕಿ ಡಾ.ಶೀಬಾ ಕೃಷಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಅಹಮದಾಲಿ, ಕೆ.ವಿ.ಸರಸ್ವತಿ, ಕೆ.ಅನೀಸನ್, ಕೆ.ಪ್ರಭಾವತಿ, ವಿ.ವಿ.ರಮೇಶನ್, ಕೃಷಿ ಕಾರ್ಯಕಾರಿ ಸಂಘದ ಅಧ್ಯಕ್ಷ ಟಿ.ಬಾಲಕೃಷ್ಣನ್, ನಗರಸಭಾ ಸದಸ್ಯರಾದ ಎಚ್.ಅಶೋಕ್ ಕುಮಾರ್, ಸಿ.ಎಚ್.ಸುಬೈದಾ, ಕೆ.ವಿ.ಮಾಯಾಕುಮಾರಿ, ಕೃಷಿ ಅಭಿವೃದ್ಧಿ ಸಮಿತಿ ಸದಸ್ಯರಾದ ಸಿ.ಕೆ.ಬಾಬುರಾಜ್, ವಿ.ಸುಕುಮಾರನ್, ಭತ್ತದ ಗದ್ದೆ ಸಮಿತಿ ಸದಸ್ಯ ಪಿ.ಸುಶಾಂತ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಸಿ.ರವೀಂದ್ರನ್ ಸ್ವಾಗತಿಸಿದರು. ಕಾಸರಗೋಡು ಕೃಷಿ ಭವನದ ಕೃಷಿ ಸಹಾಯಕ ರವಿ ವಂದಿಸಿದರು.