ಕಾಸರಗೋಡು: ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ನೀರು ಮತ್ತು ಪರಿಸರವನ್ನು ಸಂರಕ್ಷಿಸಲು ಸೈಕಲ್‍ನಲ್ಲಿ ಭಾರತದಾದ್ಯಂತ ಸಂಚರಿಸುತ್ತಿರುವ ಕೋಲ್ಕತ್ತಾದ ಮೊಹಮ್ಮದ್ ಇರ್ಫಾನ್ ಸಿದ್ದೀಕ್ ಅವರನ್ನು ಜೆಸಿಐ ಕಾಸರಗೋಡು ಸ್ವಾಗತಿಸಿದರು.
2022 ನವೆಂಬರ್ 14 ರಂದು ಕೋಲ್ಕತ್ತಾದಿಂದ ವಿವಿಧ ರಾಜ್ಯಗಳಿಗೆ ಪ್ರಯಾಣ ಪ್ರಾರಂಭಿಸಿದ ಸಿದ್ದೀಕ್ ಮಂಗಳೂರು ಮೂಲಕ ಕಾಸರಗೋಡಿಗೆ ಆಗಮಿಸಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯ ಸಮಾಜವನ್ನು ಕಾಡುತ್ತಿರುವ ಮಹಾಮಾರಿಯಾಗಿದ್ದು, ಇದರ ವಿರುದ್ಧ ಜನ ಜಾಗೃತಿ ಅತೀ ಮುಖ್ಯವಾಗಿದೆ. ಜತೆಗೆ ಪರಿಸರ, ಜಲ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು, ಈ ಬಗ್ಗೆಯೂ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನ ಸೈಕಲ್ ಯಾತ್ರೆ ಮೂಲಕ ನಡೆಸುತ್ತಿದ್ದೇನೆ ಎಂಬುದಾಗಿ ಸಿದ್ದೀಕ್ ತಿಳಿಸುತ್ತಾರೆ.
ಮುಂದೆ ತಿರುವನಂತಪುರ ಮೂಲಕ ತಮಿಳುನಾಡು ಪ್ರವೇಶಿಸುವುದಾಗಿ ತಿಳಿಸಿದ್ದಾರೆ. ಜೇಸಿಐ ಕಾಸರಗೋಡು ಅಧ್ಯಕ್ಷ ಯತೀಶ್ ಬಲ್ಲಾಳ್ ಆಔಋಊ ಸಿದ್ದೀಕ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಕೆ.ಬಿ.ಅಬ್ದುಲ್ ಮಜೀದ್, ಸಿ.ಕೆ.ಅಜಿತ್ ಕುಮಾರ್, ಶಿಹಾಬ್ ಊದ್ ಉಪಸ್ಥಿತರಿದ್ದರು.