ಕಾಸರಗೋಡು: ಪುತ್ತಿಗೆ ಪಂಚಾಯಿತಿಯ ಎಡನಾಡು ಗ್ರಾಮ ಕಚೇರಿಗೆ ಗ್ರಾಮ ಅದಾಲತ್ ಅಂಗವಾಗಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಭೇಟಿ ನೀಡಿದರು. ಇದೇ ಸಂದರ್ಭ ಪಂಚಾಯಿತಿಯ ಸಿದ್ಧಿಬಯಲು ಪ್ರದೇಶದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕೆಂಪು ಕಲ್ಲು ಕ್ವಾರಿಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಮೂರು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅನಧಿಕೃತ ಕಲ್ಲುಗಣಿಗಾರಿಕೆಗೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸುವಂತೆ ಗ್ರಾಮಾಧಿಕಾರಿಗೆ ತಿಳಿಸಲಾಯಿತು. ಗ್ರಾಮಾಧಿಕಾರಿ ಕಚೇರಿ ಭೇಟಿ ಅಂಗವಾಗಿ ಸಾರ್ವಜನಿಕರು ಹಾಗೂ ಪುತ್ತಿಗೆ ಪಂಚಾಯಿತಿ ಸದಸ್ಯರಿಂದಲೂ ದೂರು ಸ್ವೀಕರಿಸಿದರು.