ಹ್ಯೂಸ್ಟನ್ (PTI): ಭಾರತ ಮೂಲದ ಆರ್ಥಿಕ ತಜ್ಞ ರಾಜ್ ಚೆಟ್ಟಿ ಅವರು, ಹಾರ್ವರ್ಡ್ ವಿಶ್ವವಿದ್ಯಾಲಯವು ಕೊಡಮಾಡುವ ಪ್ರತಿಷ್ಠಿತ ಜಾರ್ಜ್ ಲೆಡ್ಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹ್ಯೂಸ್ಟನ್ (PTI): ಭಾರತ ಮೂಲದ ಆರ್ಥಿಕ ತಜ್ಞ ರಾಜ್ ಚೆಟ್ಟಿ ಅವರು, ಹಾರ್ವರ್ಡ್ ವಿಶ್ವವಿದ್ಯಾಲಯವು ಕೊಡಮಾಡುವ ಪ್ರತಿಷ್ಠಿತ ಜಾರ್ಜ್ ಲೆಡ್ಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚೆಟ್ಟಿ ಅವರೊಟ್ಟಿಗೆ ಹಾರ್ವರ್ಡ್ ವೈದ್ಯಕೀಯ ಶಾಲೆಯ ಸಿಸ್ಟಂ ಬಯಾಲಜಿ ವಿಭಾಗದ ಪ್ರಾಧ್ಯಾಪಕ ಮೈಕೆಲ್ ಸ್ಪ್ರಿಂಗರ್ ಕೂಡ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಸದ್ಯ ರಾಜ್ ಚೆಟ್ಟಿ ಅವರು ಹಾರ್ವರ್ಡ್ ವಿ.ವಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅಲ್ಲದೇ, ಆರ್ಥಿಕ ಅಸಮಾನತೆಗೆ ಸಂಬಂಧಿಸಿದಂತೆ ಸಮಾಜ ವಿಜ್ಞಾನ ಹಾಗೂ ಅವಕಾಶದ ಒಳನೋಟಗಳನ್ನು ಕುರಿತು ಅಧ್ಯಯನ ನಡೆಸುವ ಸಂಸ್ಥೆಯ ನಿರ್ದೇಶಕರೂ ಆಗಿದ್ದಾರೆ. ವಿ.ವಿಯಲ್ಲಿ ಆರ್ಥಿಕ ತಜ್ಞರು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
'ಆರ್ಥಿಕ ಚಲನಶೀಲತೆಗೆ ಸಂಬಂಧಿಸಿದಂತೆ ಚೆಟ್ಟಿ ಅವರು ತಲಸ್ಪರ್ಶಿ ಅಧ್ಯಯನ ನಡೆಸಿದ್ದಾರೆ. ಅವರು ಮಂಡಿಸಿರುವ ಆರ್ಥಿಕ ದತ್ತಾಂಶಗಳು ಅಮೆರಿಕದ ನೀತಿ ನಿರೂಪಕರಿಗೆ ಹೆಚ್ಚು ಸಹಕಾರಿಯಾಗಿವೆ' ಎಂದು ವಿ.ವಿಯ ಮುಖ್ಯ ಶೈಕ್ಷಣಿಕ ಅಧಿಕಾರಿ ಅಲನ್ ಎಂ. ಗಾರ್ಬರ್ ತಿಳಿಸಿದ್ದಾರೆ.