HEALTH TIPS

ಮೃತಪಟ್ಟ ತಂದೆ ಹೆಸರಲ್ಲಿ ಟ್ರಾಫಿಕ್ ನೋಟಿಸ್​: ದಂಡ ಕಟ್ಟಲ್ಲ ಬೇಕಿದ್ರೆ ಅಪ್ಪನನ್ನು ಬಂಧಿಸಲಿ ಎಂದ ಪುತ್ರ!

                     ಪಾಲಕ್ಕಾಡ್:ಒಂದೂವರೆ ವರ್ಷದ ಹಿಂದೆ ಮೃತಪಟ್ಟಿರುವ ವ್ಯಕ್ತಿಯ ಹೆಸರಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಅಡಿಯಲ್ಲಿ ಸಂಚಾರಿ ಪೊಲೀಸರು ನೋಟಿಸ್​ ನೀಡಿರುವ ಘಟನೆ   ಪಾಲಕ್ಕಾಡ್ ನಲ್ಲಿ ನಡೆದಿದೆ.

               ನೋಟಿಸ್​ ಅನ್ನು ಪಲಕ್ಕಾಡ್​ನಲ್ಲಿರುವ ವಿನೋದ್​ ಎಂಬುವರ ಮನೆಗೆ ಕಳುಹಿಸಲಾಗಿದೆ.

ಮೃತ ವಿನೋದ್ ಅವರ ತಂದೆ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಹಿಂಬದಿ ಸೀಟಿನ ಪ್ರಯಾಣಿಕರು ಹೆಲ್ಮೆಟ್ ಧರಿಸಿರಲಿಲ್ಲ ಎಂಬುದನ್ನು ಎಐ ಕ್ಯಾಮೆರಾ ಪತ್ತೆಹಚ್ಚಿರುವ ಸಂಬಂದ ನೋಟಿಸ್​ ನೀಡಲಾಗಿದೆ. ಆದರೆ, ವಿನೋದ್​ ಹೇಳುವುದೇ ಬೇರೆ.

               ವಿನೋದ್​ ಅವರ ತಂದೆಯ ಹೆಸರು ಚಂದ್ರಶೇಖರನ್​. ಪಲಕ್ಕಾಡ್​ನ ಕಲವಪಡ ಮೂಲದವರು. 89ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು, ಒಂದೂವರೆ ವರ್ಷ ಕಳೆದಿದೆ. ಆಲ್ಝೈಮರ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಚಂದ್ರಶೇಖರನ್​ ಸಾವಿಗೂ ಮುನ್ನ 7 ತಿಂಗಳ ಕಾಲ ಹಾಸಿಗೆ ಹಿಡಿದಿದ್ದರು. ಅಂದಿನಿಂದ ಪಂಕ್ಚರ್​ ಹಾಕಿಸಲು ಸಹ ಸ್ಕೂಟರ್​ ಹೊರಗೆ ತೆಗೆದುಕೊಂಡು ಹೋಗಿಲ್ಲ ಎಂದು ವಿನೋದ್​ ಹೇಳಿದ್ದಾರೆ.

                   ನೋಟಿಸ್​ ಬಂದಿದ್ದನ್ನು ನೋಡಿ ನಮಗೇ ಶಾಕ್​ ಆಗಿದೆ. ಯಾರೂ ಕೂಡ ನನ್ನ ತಂದೆಯ ಸ್ಕೂಟರ್​ ಅನ್ನು ಮುಟ್ಟಿಲ್ಲ. ಕಳೆದ ಒಂದೂವರೆ ವರ್ಷದಿಂದ ಸ್ಕೂಟರ್​ ಅನ್ನು ಹೊರಗಡೆ ತೆಗೆದುಕೊಂಡು ಹೋಗಿಲ್ಲ. ಈಗ ನೋಡಿದರೆ ನೋಟಿಸ್​ ಬಂದಿದೆ. ನಾನು ಯಾವುದೇ ಕಾರಣಕ್ಕೂ ದಂಡ ಕಟ್ಟುವುದಿಲ್ಲ. ಬೇಕಾದ್ರೆ ಈಗ ಅವರು ನನ್ನ ತಂದೆಯನ್ನು ಬಂಧಿಸಲಿ, ಅದನ್ನು ಬಿಟ್ಟು ಇನ್ನೇನು ಮಾಡಲು ಸಾಧ್ಯ ಎಂದು ವಿನೋದ್​ ಹೇಳಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries