ಪುರಾಣ ವಿವಾದದ ಹೆಸರಿನಲ್ಲಿ ಸಂದೀಪಾನಂದ ಗಿರಿ ಹಿಂದೂ ದೇವತೆಗಳ ಹೆಸರಿನಲ್ಲಿ ಅಶ್ಲೀಲತೆಯನ್ನು ಹರಡಿರುವುದು ಮತ್ತೆ ವಿವಾದವಾಗಿದೆ. ಗಣಪತಿ ಎಂಬುದು ಕಟ್ಟುಕಥೆ ಎಂದು ಸ್ಪೀಕರ್ ಎ.ಎನ್.ಶಂಸೀರ್ ನೀಡಿರುವ ಹೇಳಿಕೆ ವಿರುದ್ಧ ಎನ್‍ಎಸ್‍ಎಸ್ ನಡೆಸಿದ ನಾಮಜಪ ಮೆರವಣಿಗೆಯನ್ನು ದೂಷಿಸÀಲು ಅವರು ಈ ರೀತಿ ಪ್ರತಿಕ್ರಿಯಿಸಿದರು.
ತಮ್ಮ ಪೇಸ್ ಬುಕ್ ಪೋಸ್ಟ್ ಮೂಲಕ ಸಂದೀಪಾನಂದ ಗಿರಿ ಹಂಚಿಕೊಂಡಿದ್ದಾರೆ. ತಾನು ಈ ಹಿಂದೆ ಭಗವದ್ಗೀತಾ ತರಗತಿ ನಡೆಸುವ ವೇಳೆ ಕೊಟ್ಟಾಯಂ ಜಿಲ್ಲೆಯ ಎನ್‍ಎಸ್‍ಎಸ್‍ನ ಮಕ್ಕಳಿಗೆ ಗಣೇಶನ ತಲೆಯ ಬದಲಿಗೆ ಆನೆಯ ತಲೆಯನ್ನು ಹಾಕುವುದರ ಹಿಂದಿನ ಕಥೆಯನ್ನು ಅವರು ಹೇಳಿದ್ದರು. ಆದರೆ ಇದೀಗ ಅದೇ ತಮ್ಮದೇ ಹೇಲಿಕೆಯನ್ನು ಮರೆಮಾಚಲು ಸಂದೀಪಾನಂದಗಿರಿ ತಿಣುಚಾಡಿರುವುದು ಕಂಡುಬಂದಿದೆ.
ಇದೇ ವೇಳೆ ಫೇಸ್ ಬುಕ್ ಪೋಸ್ಟ್ ಮೂಲಕ ಹಿಂದೂ ಧರ್ಮ ಮತ್ತು ನಾಯರ್ ಸಮಾಜದ ಮೇಲೆ ದಾಳಿ ಮಾಡುತ್ತಿದ್ದಾರೆ. ಇದೇ ವೇಳೆ, ಭಾಗವತ ಆಚಾರ್ಯರಂತೆ ನಟಿಸುವುದು ಮತ್ತು ಇನ್ನೊಂದೆಡೆ ಹಿಂದೂ ನಂಬಿಕೆಯನ್ನು ಅವಮಾನಿಸುವುದು ಸಂದೀಪಾನಂದಗಿರಿಯ ಚಾಳಿ. ಸಿಪಿಎಂನ ಅಭಿಮಾನಿಯಾಗಿರುವ ಅವರು ಈ ಹಿಂದೆಯೂ ಈ ರೀತಿ ಹಿಂದೂ ನಂಬಿಕೆಗಳನ್ನು ಅವಮಾನಿಸಿದ್ದರು. ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆದಿ ಶಂಕರಾಚಾರ್ಯರನ್ನು ನೋಡಿದರೆ ಚೆಗುವೇರಾ ಅವರಂತೆ ಕಾಣುತ್ತಾರೆ ಮತ್ತು ವೇದಗಳ ಸಾರ ಕಮ್ಯುನಿಸಂ ಎಂದು ಹೇಳಿದ್ದರು.
ಅವರು ಸಿಪಿಎಂಗಾಗಿ ನಿಯಮಿತವಾಗಿ ಕೆಲಸ ಮಾಡುವ ತಮ್ಮ ಹೋಸ್ಟೇ ಸಹಿತ ಸುತ್ತಮುತ್ತಲಿನ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಆರೋಪಿಸಲ್ಪಟ್ಟರು ಮತ್ತು ಹಿಮಾಲಯಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದಾಗಿ ಹೇಳಿ ಹಣ ಸುಲಿಗೆ ಮಾಡುವ ವಿಷಯ ಭಾರೀ ಚರ್ಚೆಗೊಳಗಾಗಿತ್ತು. ಅವರು ಹಿಂದೂ ನಂಬಿಕೆಗಳನ್ನು ಅವಹೇಳನ ಮಾಡಲು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಬೆಂಕಿಹಚ್ಚುವ ಪೋಸ್ಟ್‍ಗಳನ್ನು ಹರಡುತ್ತಿರುವುದು ಸಾಮಾನ್ಯವಾಗಿದೆ.