ತಿರುವನಂತಪುರ: ಕೇರಳದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮುಳೆಯರ ರತೀಶ್ ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮೋರ್ಚಾ ತಿರುವನಂತಪುರ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕಚೇರಿ ಎದುರು ಆಯೋಜಿಸಿದ್ದ ಅಲುವಾದಲ್ಲಿ ಹತ್ಯೆಗೀಡಾದ ಐದು ವರ್ಷದ ಬಾಲಕಿಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇರಳಕ್ಕೆ ಬರುವ ಅನ್ಯರಾಜ್ಯ ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ ಪೆÇಲೀಸರು, ಕಾರ್ಮಿಕ ಇಲಾಖೆ ಹಾಗೂ ಸರ್ಕಾರ ವಿಫಲವಾಗಿದೆ ಎಂಬುದಕ್ಕೆ ಆಲುವಾದಲ್ಲಿ ನಡೆದ ಕೊಲೆಯೇ ಇತ್ತೀಚಿನ ಉದಾಹರಣೆ ಎಂದು ಟೀಕಿಸಿದರು.
ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪರಾಯಿಲ್ ಮೋಹನನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವ ಸ್ವಪ್ನಜಿತ್ ಮಾತನಾಡಿದರು. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಿಶಾಂತ್, ಮಹೇಶ್, ಪದಾಧಿಕಾರಿಗಳಾದ ಕರುಂಬುಕೋಣಂ ಸಿಜು, ಪೂಂಚಕರಿ ರತೀಶ್, ಕೈಮನಂ ಮನೋಜ್, ಕುಮಾರಿ, ಮಂಜು, ಅಜಿತ್ ಉಪಸ್ಥಿತರಿದ್ದರು.