ಕೊಲ್ಲಂ: ಪ್ರವಾಸಕ್ಕೆಂದು ರಾಜ್ಯಕ್ಕೆ ಬಂದು, ಸ್ಥಳೀಯ ಆಶ್ರಮದಲ್ಲಿ ತಂಗಿದ್ದ ಅಮೆರಿಕ ಮೂಲದ ಮಹಿಳೆಯನ್ನು ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಿಂದ ವರದಿಯಾಗಿದೆ.
ಕೊಲ್ಲಂ: ಪ್ರವಾಸಕ್ಕೆಂದು ರಾಜ್ಯಕ್ಕೆ ಬಂದು, ಸ್ಥಳೀಯ ಆಶ್ರಮದಲ್ಲಿ ತಂಗಿದ್ದ ಅಮೆರಿಕ ಮೂಲದ ಮಹಿಳೆಯನ್ನು ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಿಂದ ವರದಿಯಾಗಿದೆ.
ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376D (ಸಾಮೂಹಿಕ ಅತ್ಯಾಚಾರ) ಹಾಗೂ 376(2)(n) (ಒಂದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ) ಅಡಿ ಎಫ್‌ಐಆರ್ ದಾಖಲಿಸಲಾಗಿದೆ.
ಜುಲೈ 31 ರಂದು ಘಟನೆ ನಡೆದಿದೆ ಎಂದು ಕರುಣಾಗರಪಳ್ಳಿ ಪೊಲೀಸರು ಮಾಹಿತಿ ನೀಡಿದ್ದಾರೆ.
44 ವರ್ಷದ ಮಹಿಳೆ ಆಶ್ರಮ ಸಮೀಪದ ಬೀಚ್‌ನಲ್ಲಿ ಕುಳಿತುಕೊಂಡಿರುವ ವೇಳೆ ಸ್ಥಳಕ್ಕೆ ತೆರಳಿದ ಆರೋಪಿಗಳು ಆಕೆಗೆ ಸಿಗರೇಟ್ ನೀಡುವ ಆಮೀಷ ಒಡ್ಡಿದ್ದಾರೆ. ಆದರೆ ಅದನ್ನು ಸಂತ್ರಸ್ತೆ ನಿರಾಕರಿಸಿದ್ದಾರೆ. ಬಳಿಕ ರಮ್ ನೀಡಿ ಆಕೆಯನ್ನು ಪುಸಲಾಯಿಸಿದ್ದಾರೆ.
ರಮ್ ಕುಡಿದು ಅಮಲೇರಿದ ನಂತರ ಆಕೆಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿ, ಸಮೀಪದ ಖಾಲಿ ಮನೆಯೊಂದರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ನೀಡಿದ ದೂರಿನಲ್ಲಿ ದಾಖಲಾಗಿದೆ.
ಜುಲೈ 22ರಂದು ಮಹಿಳೆ ಕೇರಳಕ್ಕೆ ಆಗಮಿಸಿದ್ದರು. ಆಗಸ್ಟ್ 1ರ ರಾತ್ರಿ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.