ಕಾಸರಗೋಡು: ಅಂಚೆಕಚೇರಿಗಳ ಮೂಲಕ ವಿದೇಶಕ್ಕೆ ವಿವಿಧ ಸಾಮಗ್ರಿ ರವಾನಿಸುವ ನಿಟ್ಟಿನಲ್ಲಿ ಕಾಸರಗೋಡು ಪ್ರಧಾನ ಅಂಚೆ ಕಚೇರಿಯಲ್ಲಿ 'ಡಾಕ್ ಘರ್ ನಿರ್ಯಾತ್ ಕೇಂದ್ರ್'ಎಂಬ ವಿಶೇಷ ಕೌಂಟರ್ ಆರಂಭಿಸಲಾಯಿತು.
ನೂತನ ಕೌಂಟರ್ ಮೂಲಕ ಬಹ್ರೇನ್‍ಗೆ ಕಳುಹಿಸಲಿರುವ ಮೊದಲ ಪಾರ್ಸೆಲ್ ಪೆÇೀಸ್ಟ್ ಮಾಸ್ಟರ್ ಕೆ ಕೃಷ್ಣದಾಸ್ ಸ್ವೀಕರಿಸಿದರು. ಕಾಸರಗೋಡು ವಿಭಾಗದ ಅಂಚೆ ಅಧೀಕ್ಷಕ ಪಿ.ಕೆ.ಶಿವದಾಸನ್, ಸಹಾಯಕ ಅಧೀಕ್ಷಕ ಎಸ್. ಭಾಗ್ಯರಾಜ್, ಪಿ.ಆರ್.ಶೀಲಾ ಉಪಸ್ಥಿತರಿದ್ದರು. ತಮ್ಮ ಉತ್ಪನ್ನಗಳನ್ನು ವಿದೇಶಕ್ಕೆ ರವನಿಸಲು ಆಸಕ್ತಿ ಹೊಂದಿರುವ ಮತ್ತು ರಫ್ತು ಪರವಾನಗಿ ಹೊಂದಿರುವ ಉದ್ಯಮಿಗಳಿಗಾಗಿ ಈ ವಿಶೇಷ ಕೌಂಟರ್ ಕಾರ್ಯನಿರ್ವಹಿಸುತ್ತದೆ. ದೇಶದಲ್ಲಿ 800ಕ್ಕೂ ಹೆಚ್ಚು ವಿಶೇಷ ಕೌಂಟರ್ ಗಳಲ್ಲಿ ಕಾಸರಗೋಡು ಜಿಲ್ಲೆಯ ಮೊದಲ ಕೌಂಟರ್ ಕಾಸರಗೋಡು ಪ್ರಧಾನ ಅಂಚೆ ಕಚೇರಿಯಲ್ಲಿ ಆರಂಭಿಸಲಾಗಿದೆ. ಕರಕುಶಲ ವಸ್ತುಗಳು, ಸಿದ್ಧ ಉಡುಪುಗಳು, ಸಂಸ್ಕರಿಸಿದ ಆಹಾರ ಉತ್ಪನ್ನಗಳು ಇತ್ಯಾದಿಗಳನ್ನು ಪಾರ್ಸೆಲ್ ಮಾಡಲು ಆಸಕ್ತಿ ಹೊಂದಿರುವ ಉದ್ಯಮಿಗಳಿಗೆ ಭಾರತ ಸರ್ಕಾರವು ಒದಗಿಸುವ ವಿಶೇಷ ಸೌಲಭ್ಯಗಳಲ್ಲಿ 'ಡಾಕ್ ಘರ್ ನಿರ್ಯಾತ್ ಕೇಂದ್ರ' ಒಂದಾಗಿದೆ. ಜಿಲ್ಲೆಯ ಉದ್ಯಮಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಘಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾಸರಗೋಡು ಪ್ರಧಾನ ಅಂಚೆ ಕಛೇರಿ ಅಥವಾ ವಿಭಾಗೀಯ ಅಧೀಕ್ಷಕರ ಕಛೇರಿಯನ್ನು ಸಂಪರ್ಕಿಸಬಹುದು. (04994 230884 , 04994 230885, ಮೊ: 9037449876)