ಯೂರಿಕ್ ಆಮ್ಲ ಸಮಸ್ಯೆ ಇದ್ದರೆ ಸಂಧಿವಾತದ ಸಮಸ್ಯೆ ತುಂಬಾನೇ ಕಾಡುವುದು, ಪ್ರಾರಂಭದಲ್ಲಿಯೇ ಚಿಕಿತ್ಸೆ ಮಾಡಿದರೆ ಒಳ್ಳೆಯದು, ಹೆಚ್ಚಾದರೆ ಇನ್ನೂ ತುಂಬಾ ಕಷ್ಟ. ಯೂರಿಕ್ ಆಮ್ಲ ಸಮಸ್ಯೆಯಿದ್ದರೆ ತುಂಬಾ ನೋವು, ಸಂಧುಗಳು ಬಿಗಿಯಾಗುವುದು, ಬೆನ್ನು, ಸೊಂಟ ನೋವು ಕಂಡು ಬರುವುದು.
ಯೂರಿಕ್ ಆಮ್ಲದ ಲಕ್ಷಣಗಳ ಬಗ್ಗೆ ಹೇಳುವುದಾದರೆ
* ಸಂಧುಗಳು ಕೆಂಪು ಬಣ್ಣಕ್ಕೆ ತಿರುಗುವುದು, ಕಾಲುಗಳಲ್ಲಿ ನೋವು ಕಂಡು ಬರುವುದು
* ನಡೆದಾಡಲು ತುಂಬಾ ಕಷ್ಟವಾಗುವುದು
* ಮಂಡಿಯನ್ನು ಮುಟ್ಟುವಾಗ ಬಿಸಿ ಬಿಸಿಯಾಗುವುದು
* ಆಗಾಗ ತಲೆಸುತ್ತುವುದು
* ಆಗಾಗ ಮೂತ್ರ ಸೋಂಕು ಉಂಟಾಗುವುದು
* ಯೂರಿಕ್ ಆಮ್ಲದ ಸಮಸ್ಯೆ ಇರುವವರಿಗೆ ಕಿಡ್ನಿ ಸ್ಟೋನ್‌ನ ಸಮಸ್ಯೆ ಕಂಡು ಬರುವುದು.
ಯೂರಿಕ್ ಆಮ್ಲಕ್ಕೆ ಉಂಟಾಗಲು ಕಾರಣಗಳೇನು?
* ಅತ್ಯಧಿಕ ರಕ್ತದೊತ್ತಡ
* ಮಧುಮೇಹ
* ಕೆಂಪು ಮಾಂಸ, ಮದ್ಯಪಾನ, ಬೀರ್, ವಿಸ್ಕಿ ಅತ್ಯಧಿಕ ಸೇವನೆ
* ಮಹಿಳೆರಿಗಿಂತ ಪುರುಷರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು
* ವಂಶವಾಹಿಯಾಗಿ ಬರುವುದು
* ಒಬೆಸಿಟಿ
ನೈಸರ್ಗಿಕವಾಗಿ ಯೂರಿಕ್ ಆಮ್ಲ ಕಡಿಮೆ ಮಾಡುವುದು ಹೇಗೆ?
ಪ್ಯೂರಿನ್ ಅಧಿಕವಿರುವ ಆಹಾರ ಸೇವನೆ ಮಾಡಬೇಡಿ
ಅತ್ಯಧಿಕ ಪ್ಯೂರಿನ್ ಇರುವ ಆಹಾರ ಸೇವಿಸಬಾರದು
* ಒಳ ಮಾಂಸ
* ಮದ್ಯ
* ಮೀನು
* ಸಿಹಿ ಪದಾರ್ಥಗಳು
ಈ ಬಗೆಯ ಆಹಾರಗಳನ್ನು ಸೇವಿಸಲೇಬಾರದು.
ಸಾಕಷ್ಟು ನೀರು ಕುಡಿಯಿರಿ
ಯೂರಿಕ್ ಆಮ್ಲದ ಸಮಸ್ಯೆ ಕಡಿಮೆ ಮಾಡು ಸಾಕಷ್ಟು ನೀರು ಕುಡಿಯಿರಿ, ದೇಹದಲ್ಲಿರುವ ಶೇ. 70ರಷ್ಟು ಯೂರಿಕ್ ಆಮ್ಲವನ್ನು ಕಿಡ್ನಿ ಮೂತ್ರದ ಮೂಲಕ ಹೊರ ಹಾಕುತ್ತದೆ. ಕಿಡ್ನಿ ಆರೋಗ್ಯ ಚೆನ್ನಾಗಿದ್ದರೆ ಈ ಯೂರಿಕ್ ಆಮ್ಲದ ಸಮಸ್ಯೆ ಕಡಿಮೆಯಾಗುವುದು.
ಮದ್ಯ ಸೇವಿಸಬೇಡಿ
ಮದ್ಯ ಅದರಲ್ಲೂ ಬೀರ್‌ನಲ್ಲಿ ಅತ್ಯಧಿಕ ಪ್ಯೂರಿನ್ ಅಂಶವಿದೆ. ಆದ್ದರಿಂದ ಯೂರಿಕ್ ಆಮ್ಲ ಸಮಸ್ಯೆ ಇರುವವರು ಮದ್ಯ ಸೇವಿಸಲೇಬಾರದು.
ಕಾಫಿ, ಟೀ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ
ಯೂರಿಕ್ ಆಮ್ಲ ಇರುವವರು ಟೀ, ಕಾಫಿ ಕುಡಿಯುವುದು ಒಳ್ಳೆಯದು. ಆದರೆ ಸಕ್ಕರೆ ಹಾಕಿ ಸೇವಿಸಬೇಡಿ.
ಮೈ ತೂಕ ಕಡಿಮೆ ಮಾಡಿ
ಮೈ ತೂಕ ಕಡಿಮೆಯಾದರೆ ಕಿಡ್ನಿ ಆರೋಗ್ಯ ಹೆಚ್ಚುವುದು, ಇದರಿಂದಾಗಿ ಯೂರಿಕ್ ಆಮ್ಲವನ್ನು ದೇಹದಿಂದ ಹೊರ ಹಾಕುವ ಕಾರ್ಯವನ್ನು ಕಿಡ್ನಿ ಸರಿಯಾಗಿ ಮಾಡುತ್ತದೆ.
ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಿ
ಮಧುಮೇಹಿಗಳಲ್ಲಿ ಈ ಯೂರಿಕ್‌ಆಮ್ಲ ಸಮಸ್ಯೆ ಹೆಚ್ಚಾಗುವುದು, ಆದ್ದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಿ.
ಯೂರಿಕ್ ಆಮ್ಲ ಸಮಸ್ಯೆ ಇರುವವರು ಈ ಆಹಾರ ಸೇವಿಸಬಹುದು
* ಮೊಟ್ಟೆ
* ನಟ್ಸ್
* ಧಾನ್ಯಗಳು
* ಕಡಿಮೆ ಕೊಬ್ಬಿನಂಶವಿರುವ ಹಾಲಿನ ಪದಾರ್ಥಗಳು
* ಚಿಕನ್
* ಏಡಿ
* ಬಾಳೆಹಣ್ಣು
* ಸೇಬು
* ಚೆರ್ರಿ
* ಕಾಫಿ
* ಸಿಟ್ರಸ್ ಹಣ್ಣುಗಳು
* ಗ್ರೀನ್ ಟೀ
ಹೂಕೋಸು, ಪಾಲಾಕ್, ಅಣಬೆ, ಬಟಾಣಿ ಇವುಗಳನ್ನು ಸೇವಿಸಬೇಡಿ.
ಮನೆಮದ್ದು
ಬೆಳಗ್ಗೆ ನೆಲ್ಲಿಕಾಯಿ ಜ್ಯೂಸ್ ಕುಡಿಯಿರಿ
ಯೂರಿಕ್ ಆಮ್ಲ ಸಮಸ್ಯೆ ಇರುವವರು ಬೆಳಗ್ಗೆ ಎದ್ದಾಗ ನೆಲ್ಲಿಕಾಯಿ ಜ್ಯೂಸ್ ಕುಡಿಯಿರಿ
* ಯೋಗ ಮಾಡುವುದರಿಂದ ಯೂರಿಕ್ ಆಮ್ಲದ ಸಮಸ್ಯೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
* ತಾಡಾಸನ
* ವೃಕ್ಷಾಸನ
* ಅರ್ಧಮತ್ಸ್ಯಾಸನ
ಈ ಆಸನಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡಿದರೆ ಒಳ್ಳೆಯದು.