HEALTH TIPS

ದೇವಾಲಯದ ಮೇಲಿದ್ದ ಒಂದು ಕೆಜಿ ಚಿನ್ನದ ಕಲಶ ಬೆಳಿಗ್ಗೆಯಾಗುವಷ್ಟರಲ್ಲಿ ನಾಪತ್ತೆ..!

              ಗುಡಿವಾಡ: ಇತ್ತೀಚೆಗೆ ನೆರೆಯ ರಾಜ್ಯಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿರ್ಜನ ಪ್ರದೇಶಗಳಲ್ಲಿನ ಬೀಗ ಹಾಕಿರುವ ಮನೆ, ದೇವಸ್ಥಾನಗಳು ಕಳ್ಳತನಕ್ಕೆ ಗುರಿಯಾಗುತ್ತಿವೆ. ಸದ್ಯ, ಇಂತಹುದೇ ಪ್ರಕರಣವೊಂದು ನಡೆದಿದ್ದು ದೇವಸ್ಥಾನದ ಮೇಲಿದ್ದ ಒಂದು ಕೆಜಿ ತೂಕದ ಚಿನ್ನದ ಕಲಶವೇ ನಾಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿವಾಡದಲ್ಲಿ ನಡೆದಿದೆ.

               ಗ್ರಾಮದ ಶಿವ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿರುವ ಬಾಲಾ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ಗೋಪುರದ ಮೇಲಿದ್ದ ಚಿನ್ನದ ಕಲಶವನ್ನು ಯಾರೋ ಕದ್ದುಕೊಂಡು ಹೋಗಿದ್ದು, 12 ವರ್ಷಗಳ ಹಿಂದೆ ಟ್ರಸ್ಟಿಗಳು ದೇವಾಲಯದ ಗೋಪುರಗಳ ಎರಡು ಶಿಖರಗಳಲ್ಲಿ ಚಿನ್ನದ ಕಲಶಗಳನ್ನು ಸ್ಥಾಪಿಸಿದ್ದರು.

             ಕಲಶವು ಒಂದು ಕೆಜಿಗಿಂತ ಹೆಚ್ಚು ತೂಕವನ್ನು ಹೊಂದಿದೆ ಎಂದು ದೇವಾಲಯದ ಆಡಳಿತಾಧಿಕಾರಿಗಳು ಬಹಿರಂಗಪಡಿಸಿದ್ದು, ಶನಿವಾರ ಬೆಳಗ್ಗೆ ಅಮ್ಮಾವಾರಿ ಗೋಪುರದ ಮೇಲಿರಬೇಕಿದ್ದ ಚಿನ್ನದ ಕಲಶ ನಾಪತ್ತೆಯಾಗಿರುವುದನ್ನು ದೇವಸ್ಥಾನದ ಉಸ್ತುವಾರಿ ನೋಡಿ ಕೂಡಲೇ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

                ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಆಲದ ಮರವೊಂದು ದೇವಾಲಯದ ತುದಿಯವರೆಗೆ ವ್ಯಾಪಿಸಿದೆ. ಇತ್ತೀಚೆಗಷ್ಟೇ ಜೋರಾದ ಗಾಳಿಯಿಂದ ಕೊಂಬೆಗಳು ಕಲಶಕ್ಕೆ ಬಡಿಯುತ್ತಿರುವುದು ದೇವಸ್ಥಾನದ ಆಡಳಿತಾಧಿಕಾರಿಗಳ ಗಮನಕ್ಕೆ ಬಂದಿತ್ತು. ಹಾಗಾಗಿ ಮರದ ಕೊಂಬೆಯಿಂದಾಗಿ ಕಲಶ ಕೆಳಗೆ ಬಿದ್ದಿದ್ದು, ಯಾರಾದರೂ ಅದನ್ನು ತೆಗೆದುಕೊಂಡು ಹೋಗಿರಬಹುದು ಅಥವಾ ಚಿನ್ನ ಎಂಬ ಕಾರಣಕ್ಕೆ ಯಾರೋ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಲವು ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries