ಬದಿಯಡ್ಕ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾರ್ಯಚಟುವಟಿಕೆಗಳ ಅಂಗವಾಗಿ ಬಂಜರು ಭೂಮಿಯನ್ನು ಕೃಷಿಯೋಗ್ಯ ಭೂಮಿಯಾಗಿ ಅಭಿವೃದ್ದಿಪಡಿಸಿದ ಸಾಧಕ ಕೃಷಿಕನನ್ನು ಗುರುವಾರ ಕೃಷಿ ದಿನ(ಸಿಂಹಮಾಸ 1)ಅಂಗವಾಗಿ ಜಿಲ್ಲಾಧಿಕಾರಿಗಳು ನೇರವಾಗಿ ಭೇಟಿಯಾಗಿ ಗೌರವಿಸಿ ಅಭಿನಂದಿಸಿದರು.
ನೀರ್ಚಾಲು ಮಲ್ಲಡ್ಕದಲ್ಲಿ ಬಂಜರು ಭೂಮಿಯನ್ನು ಉದ್ಯೋಗ ಖಾತರಿ ಯೋಜನೆಯ ಮೂಲಕ ಕೃಷಿಭೂಮಿಯಾಗಿ ಅಭಿವೃದ್ದಿಪಡಿಸಿದ ಕೆ.ಶ್ರೀಧರನ್ ಪೆರುಂಬಳ ಅವರನ್ನು ಜಿಲ್ಲಾಧಿಕಾರಿ ಇನ್ಬಾಶೇಖರ್ ಸನ್ಮಾನಿಸಿದರು. ಪಂಚಾಯಿತಿ ವ್ಯಾಪ್ತಿಯ ವಿವಿಧ ಉದ್ಯೋಗ ಖಾತ್ರಿ ಕಾಮಗಾರಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಬಡತನ ನಿರ್ಮೂಲನಾ ಇಲಾಖೆ ಯೋಜನಾ ನಿರ್ದೇಶಕ ಜಲೀಲ್, ಎಂಜಿಎನ್‍ಆರ್‍ಇಜಿಎಸ್ ಜಿಲ್ಲಾ ಎಂಜಿನಿಯರ್ ಸಹದ್, ಜಂಟಿ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಅಶ್ರಫ್, ಗ್ರಾಮ ವಿಸ್ತರಣಾಧಿಕಾರಿ ಪುರುμÉೂೀತ್ತಮನ್ ಮೊದಲಾದವರು ಜಿಲ್ಲಾಧಿಕಾರಿ ಜೊತೆಗಿದ್ದರು. ಜಿಲ್ಲಾಧಿಕಾರಿ ಗ್ರಾಮ ಕಚೇರಿ ಭೇಟಿಯ ಅಂಗವಾಗಿ ಬೇಳಕ್ಕೆ ಆಗಮಿಸಿದ್ದರು.