ಕಾಸರಗೋಡು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಮುಖಂಡರಿಗೆ ಸ್ವಾಗತ ಸಮಾರಂಭ ಪುತ್ತಿಗೆ ಮುಹಿಮ್ಮಾತ್‍ನಲ್ಲಿ ಜರುಗಿತು. ಎಸ್ಸೆಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಸೆಪ್ಟಂಬರ್‍ನಲ್ಲಿ ಬೆಂಗಳೂರಿನಲ್ಲಿ ನಡೆಯುವ ಗೋಲ್ಡನ್ ಫಿಫ್ಟಿ ಅಂಗವಾಗಿ ಮುಹಿಮ್ಮತ್‍ನಲ್ಲಿ ಆಯೋಜಿಸಿದ್ದ "ಗೋಲ್ಡನ್ ಬೆಲ್" ಕಾರ್ಯಕ್ರಮದಲ್ಲಿ ಮುಖಂಡರು ಪಾಲ್ಗೊಂಡಿದ್ದರು.
ಸಯ್ಯದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ ಮಖಾಂ ಝಿಯಾರತ್‍ಗೆ ನೇತೃತ್ವ ನೀಡುವ ಮುಖಾಂತರ ಅಬ್ದುಸ್ಸಲಾಮ್ ಅಹ್ಸನಿ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ಮುಹಿಮ್ಮಾತ್ ಉಪಾಧ್ಯಕ್ಷ ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್ ಸಮಾರಂಭ ಉದ್ಘಾಟಿಸಿದರು. ಮುಹಿಮ್ಮಾತ್ ಜನರಲ್ ಮ್ಯಾನೇಜರ್ ಉಮರ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಎಸ್‍ವೈಎಸ್ ಜಿಲ್ಲಾ ಫಿನಾನ್ಸಿಯಲ್ ಸೆಕ್ರಟೆರಿ ಮೂಸಾ ಸಖಾಫಿ ಕಳತ್ತೂರು ಸಂಸ್ಥೆಯ ಕುರಿತು ವಿವರಿಸಿದರು. ಎಸ್ಸೆಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಸುಫ್ಯಾನ್ ಸಖಾಫಿ ಗೋಲ್ಡನ್ ಫಿಫ್ಟಿಯ ಸಂದೇಶ ನೀಡಿದರು. ಮುಹಿಮ್ಮತ್ ಕಾರ್ಯದರ್ಶೀ ಅಬೂಬಕ್ಕರ್ ಕಾಮಿಲ್ ಸಖಾಫಿ, ಎಸ್ಸೆಸೆಫ್ ಕರ್ನಾಟಕ ರಾಜ್ಯ ಮುಖಂಡರಾದ ಮುಸ್ತಫಾ ಹಿಮಮಿ ಅಲ್ ನಈಮಿ, ಸಫ್ವಾನ್ ಚಿಕ್ಕಮಗಳೂರು, ಉಬೈದುಲ್ಲಾ, ಕಮರುದ್ದೀನ್ ಸಖಾಫಿ , ಅನ್ವರ್ ಸಅದಿ, ಮುಹಮ್ಮದ್ ಇರ್ಷಾದ್, ಮುಜೀಬ್ ಕೊಡಗು ಮೊದಲಾದವರು ಉಪಸ್ಥಿತರಿದ್ದರು. ಗೋಲ್ಡನ್ ಫಿಫ್ಟಿ ಅಂಗವಾಗಿ ನಡೆದ ಚರ್ಚಾ ಸಭೆಯಲ್ಲಿ ಸುಹೈಲ್ ಮಾಣಿ, ಇಮ್ರಾನ್ ಮತ್ತು ಅಲಿ ಪಾಲ್ಗೊಂಡರು.