HEALTH TIPS

'ಇಂಡಿಯಾ'ದೊಂದಿಗೆ ಮೈತ್ರಿ ಯೋಚನೆ ಇಲ್ಲ: ಪ್ರಕಾಶ್‌ ಅಂಬೇಡ್ಕರ್‌

                  ವದೆಹಲಿ: ಯಾವ ಪಾರಿವಾಳವೂ ಬಂದಿಲ್ಲ, ಫೋನ್ ಕರೆಯೂ ಬಂದಿಲ್ಲ... ಎನ್ನುವ ಮೂಲಕ 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರತಿಪಕ್ಷಗಳ I.N.D.I.A ಮೈತ್ರಿ ಕೂಟಕ್ಕೆ ಸೇರಲು ಕಾಂಗ್ರೆಸ್‌ ನಾಯಕರು ಸಂಪರ್ಕಿಸಿದ್ದರು ಎಂಬ ವರದಿಗಳನ್ನು 'ವಂಚಿತ ಬಹುಜನ ಅಘಾಡಿ' ಪಕ್ಷದ ಸ್ಥಾಪಕ ಪ್ರಕಾಶ್‌ ಅಂಬೇಡ್ಕರ್‌ ತಳ್ಳಿಹಾಕಿದ್ದಾರೆ.

                ಅಲ್ಲದೆ ಕೂಟಕ್ಕೆ ಸೇರಲು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಎನ್ನುವುದು ಸುಳ್ಳು, I.N.D.I.A ಕೂಟದೊಂದಿಗೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಯೋಚನೆ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

                   ಇದು ಕಾಂಗ್ರೆಸ್‌ನ ಪೇಟೆಂಟ್ ವಿಧಾನವಾಗಿದೆ. ಸರಿಯಾದ ರೀತಿಯ ಸಂವಹನ ನಡೆಸದೆ ಎಲ್ಲೆಡೆ ಹೇಳಿಕೊಂಡು ಬಂದರೆ ಇದೇ ರೀತಿ ಆಗುತ್ತದೆ ಎಂದು ಪ್ರಕಾಶ್‌ ಅಂಬೇಡ್ಕರ್ ಹೇಳಿದ್ದಾರೆ.

                   ಮುಂಬೈ ಮೂಲದ ಪ್ರಕಾಶ್‌ ಅಂಬೇಡ್ಕರ್‌ ಅವರು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಮೊಮ್ಮಗ. ಇವರು ವಕೀಲರು ಕೂಡ ಹೌದು. ಎರಡು ಬಾರಿ ಅಕೊಲಾ ಪ್ರದೇಶದಿಂದ ಸಂಸದರಾಗಿ ಲೋಕಸಭೆಗೆ ಹಾಗೂ ಒಂದು ಬಾರಿ ರಾಜ್ಯ ಸಭಾ ಸಂಸದರಾಗಿ ಆಯ್ಕೆಯಾಗಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries