ಚೆನ್ನೈ: ಗೆಲುವಿನ ನಾಗಾಲೋಟ ವಿಸ್ತರಿಸಿದ ಹರ್ಮಾನ್ಪ್ರೀತ್ ಸಿಂಗ್ ಸಾರಥ್ಯದ ಭಾರತ ತಂಡ 7ನೇ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಬೀಗಿದೆ. ಮಲೇಷ್ಯಾ ವಿರುದ್ಧದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಆತಿಥೇಯ ಭಾರತ ತಂಡ 4-3 ಗೋಲುಗಳಿಂದ ಗೆಲುವು ದಾಖಲಿಸಿತು.

ಮೇಯರ್ ರಾಧಾಕೃಷ್ಣನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಭಾರತ ತಂಡ ಜುಗ್ರಾಜ್ ಸಿಂಗ್ 9ನೇ ನಿಮಿಷದಲ್ಲಿ ಸಿಡಿಸಿದ ಗೋಲಿನ ಬಲದಿಂದ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ ನಂತರ ಮಲೇಷ್ಯಾ ನೀಡಿದ ತಿರುಗೇಟಿಗೆ ಭಾರತ ತಂಡ ತತ್ತರಿಸಿತು. 14ನೇ ನಿಮಿಷದಲ್ಲಿ ಅಬು ಕಮಲ್ ಅರ್ಜೈ ಫೀಲ್ಡ್ ಗೋಲು ಸಿಡಿಸಿ ಪಂದ್ಯದಲ್ಲಿ ಸಮಬಲ ಸಾಧಿಸಿದರು. ನಂತರ ರಝಿ ರಹೀಂ (18ನೇ ನಿಮಿಷ) ಮತ್ತು ಅಮಿನುದ್ದೀನ್ ಮುಹಮದ್ (28) ತಲಾ ಒಂದು ಗೋಲು ಬಾರಿಸಿದರು. ಇದರೊಂದಿಗೆ ಮಲೇಷ್ಯಾ ಮೊದಲಾರ್ಧದಲ್ಲಿ 3-1 ಮುನ್ನಡೆ ಸಾಧಿಸಿ ಬೀಗಿತು.
ದ್ವೀತಿಯಾರ್ಧದಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದ ಭಾರತ, 45ನೇ ನಿಮಿಷದಲ್ಲಿ ಗುರ್ಜಂತ್ ಸಿಂಗ್ ಮತ್ತು ನಾಯಕ ಹರ್ಮಾನ್ಪ್ರೀತ್ ಸಿಂಗ್ ಕೆಲವೇ ಸೆಕೆಂಡ್ ಅಂತರದಲ್ಲಿ ಸಿಡಿಸಿದ 2 ಗೋಲುಗಳಿಂದ 3ನೇ ಕ್ವಾರ್ಟರ್ ಅಂತ್ಯಕ್ಕೆ 3-3 ಸಮಬಲ ಸಾಧಿಸಿತು.
ಕೊನೇ ಕ್ವಾರ್ಟರ್ನಲ್ಲಿ ಆಕಾಶ್ದೀಪ್ ಸಿಂಗ್ (56ನೇ ನಿಮಿಷ) ಸಿಡಿಸಿದ ಫೀಲ್ಡ್ ಗೋಲಿನಿಂದ ಭಾರತ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಲೀಗ್ ಹಂತದಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಜಯ, 1 ಡ್ರಾ ಸಾಧಿಸಿ ಅಜೇಯವಾಗಿದ್ದ ಭಾರತ ತಂಡ, ಸೆಮಿಫೈನಲ್ನಲ್ಲಿ ಜಪಾನ್ ವಿರುದ್ಧ 5-0ಯಿಂದ ಸುಲಭ ಗೆಲುವು ದಾಖಲಿಸಿತ್ತು. ಟೂರ್ನಿಯಲ್ಲಿ ಭಾರತ ತಂಡ ಈ ಮುನ್ನ 2011, 2016, 2018ರಲ್ಲಿ ಪ್ರಶಸ್ತಿ ಗೆದ್ದಿತ್ತು.