ಪುಣೆ: ಮಹಾರಾಷ್ಟ್ರದ ಪುಣೆ ಮೂಲದ ವ್ಯಕ್ತಿ ನಡೆಸುತ್ತಿರುವ ಹಿಂದೂ ಧರ್ಮದ ಕುರಿತ ವೆಬ್‌ಸೈಟ್‌ನಲ್ಲಿ ಭಾರತದಲ್ಲಿ ಬಾಂಬ್ ಸ್ಫೋಟ ಮತ್ತು ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡುವುದಾಗಿ ವ್ಯಕ್ತಿಯೊಬ್ಬ ಕಮೆಂಟ್ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ. 6 ರಂದು ವೆಬ್‌ಸೈಟ್‌ನಲ್ಲಿ ಕಮೆಂಟ್ ಪೋಸ್ಟ್ ಮಾಡಿದ ಎಂ.ಎ.ಮೊಖೀಮ್ ಎಂಬ ವ್ಯಕ್ತಿ ವಿರುದ್ಧ ಇಲ್ಲಿನ ಆಲಂಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪುಣೆ ಜಿಲ್ಲೆಯ ನಿವಾಸಿ ರಾಹುಲ್ ದುಧಾನೆ ಹಿಂದೂ ಧರ್ಮದ ಕುರಿತ ಸತ್ಯಗಳಿಗೆ ಸಂಬಂಧಿಸಿದ ವೆಬ್‌ಸೈಟ್ ನಡೆಸುತ್ತಿದ್ದಾರೆ.
ದುಧಾನೆ ತನ್ನ ವೆಬ್‌ಸೈಟ್ ಪರಿಶೀಲನೆ ವೇಳೆ ಎಂ. ಎ. ಮೊಖೀಮ್ ಅವರ ಕಾಮೆಂಟ್ ನೋಡಿದ್ದಾರೆ. 'ನಾನು ಭಾರತದಲ್ಲಿ ಬಾಂಬ್ ಸ್ಫೋಟ ಯೋಜಿಸುತ್ತೇನೆ. ಭಯೋತ್ಪಾದಕ ಸಂಘಟನೆಗಳಿಗೆ ಧನಸಹಾಯ ನೀಡುತ್ತೇನೆ. ಹಿಂದೂ ಧರ್ಮವನ್ನು ನಾಶ ಮಾಡುತ್ತೇನೆ. ನರೇಂದ್ರ ಮೋದಿಯನ್ನೂ ಕೊಲ್ಲುತ್ತೇನೆ' ಎಂದು ಬರೆದಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ ಸುಹೇಲ್ ಶರ್ಮಾ ಹೇಳಿದ್ದಾರೆ.
'ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಐಪಿ ವಿಳಾಸ ಭಾರತದ ಹೊರಗಿನಿಂದ ಬಂದಂತೆ ತೋರುತ್ತದೆ. ಅದನ್ನು ಪರಿಶೀಲಿಸಲಾಗುತ್ತಿದೆ' ಎಂದರು.