HEALTH TIPS

ದೆಹಲಿ: ವಿಸ್ತಾರ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿದ್ದ ಎಟಿಸಿ, ತಪ್ಪಿದ ಅವಘಡ

               ವದೆಹಲಿ: ಏರ್‌ ಟ್ರಾಫಿಕ್‌ ಕಂಟ್ರೋಲರ್‌ (ಎಟಿಸಿ) ಅಜಾಗರೂಕತೆಯಿಂದ ಅನುಮತಿ ನೀಡಿದ ಪರಿಣಾಮ ಸಂಭವಿಸಲಿದ್ದ, ವಿಸ್ತಾರ ಸಂಸ್ಥೆಯ ಎರಡು ವಿಮಾನಗಳನ್ನು ಒಳಗೊಂಡ ಅವಘಡವೊಂದನ್ನು ಬುಧವಾರ ತಪ್ಪಿಸಲಾಗಿದೆ.

               ಈ ಘಟನೆ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತನಿಖೆ ನಡೆಸಲಿದ್ದು, ಕರ್ತವ್ಯದಲ್ಲಿದ್ದ ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಅವರ ಕೆಲಸದ ಪಾಳಿಯನ್ನು ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

              ಅಹಮದಾಬಾದ್‌ನಿಂದ ಬಂದಿದ್ದ ವಿಮಾನವು (ವಿಟಿ1725) '29ಎಲ್‌' ರನ್‌ವೇನಲ್ಲಿ ಇಳಿದಿತ್ತು. ಈ ವಿಮಾನ ರನ್‌ವೇ '29ಆರ್‌' ಮೂಲಕ ಹಾಯ್ದು ಹೋಗಲು ಎಟಿಸಿ ಅನುಮತಿ ನೀಡಿದ್ದರು.

                ಇನ್ನೊಂದೆಡೆ, '29ಆರ್' ರನ್‌ವೇ ಮೂಲಕವೇ ಟೇಕಾಫ್‌ ಆಗಲು ದೆಹಲಿ-ಬಾಗ್‌ಡೋಗ್ರ ವಿಮಾನಕ್ಕೆ(ವಿಟಿ1725) ಅನುಮತಿ ನೀಡಿದ್ದರು. ಎರಡೂ ವಿಮಾನಗಳು ಹೊರಟಿದ್ದರೆ ರಭಸದಿಂದ ಡಿಕ್ಕಿಯಾಗುವ ಸಾಧ್ಯತೆ ಇತ್ತು.

                 ಈ ಬಗ್ಗೆ ಅಹಮದಾಬಾದ್‌ನಿಂದ ಬಂದಿಳಿದಿದ್ದ ವಿಮಾನದ ಮಹಿಳಾ ಪೈಲೆಟ್‌ ಮಾಹಿತಿ ನೀಡಿದ ಕೂಡಲೇ ಎಚ್ಚೆತ್ತುಕೊಂಡ ಎಟಿಸಿ, ಟೇಕಾಫ್‌ ಆಗದಂತೆ ಬಾಗ್‌ಡೋಗ್ರಕ್ಕೆ ಹೊರಟಿದ್ದ ವಿಮಾನಕ್ಕೆ ಸೂಚನೆ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ವಿಸ್ತಾರ ವಿಮಾನ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries