ಕೋಲ್ಕತ: ವಿಶ್ವವಿದ್ಯಾಲಯ, ಕಾಲೇಜು ಎಂದಮೇಲೆ ಅಲ್ಲೊಂದಿಷ್ಟು ಶಿಸ್ತು-ನಿಯಮ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಕಡೆ ವಿದ್ಯಾರ್ಥಿನಿಯೊಬ್ಬಳು ವಿವಿ ಕ್ಯಾಂಪಸ್ನಲ್ಲಿ ಮದ್ಯಪಾನ-ಧೂಮಪಾನ ನಮ್ಮ ಹಕ್ಕು ಎಂದು ವಾದಿಸಿದ್ದಾಳೆ.
ಕೋಲ್ಕತ: ವಿಶ್ವವಿದ್ಯಾಲಯ, ಕಾಲೇಜು ಎಂದಮೇಲೆ ಅಲ್ಲೊಂದಿಷ್ಟು ಶಿಸ್ತು-ನಿಯಮ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಕಡೆ ವಿದ್ಯಾರ್ಥಿನಿಯೊಬ್ಬಳು ವಿವಿ ಕ್ಯಾಂಪಸ್ನಲ್ಲಿ ಮದ್ಯಪಾನ-ಧೂಮಪಾನ ನಮ್ಮ ಹಕ್ಕು ಎಂದು ವಾದಿಸಿದ್ದಾಳೆ.
ಕೋಲ್ಕತದ ಜಾಧವ್ಪುರ್ ಯುನಿವರ್ಸಿಟಿಯ ವಿದ್ಯಾರ್ಥಿನಿಯೊಬ್ಬಳು ಇಂಥದ್ದೊಂದು ವಾದ ಮಾಡಿದ್ದಾಳೆ.
ವಿವಿ ಕ್ಯಾಂಪಸ್ನ ಹಲವೆಡೆ ಸಿಸಿಟಿವಿ ಅಳವಡಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿದ್ಯಾರ್ಥಿನಿಯೊಬ್ಬಳು, ಕಾಲೇಜು ನಮ್ಮ ಎರಡನೇ ಮನೆ, ಹೀಗಿರುವಾಗ ಇಲ್ಲಿ ಮದ್ಯಪಾನ-ಧೂಮಪಾನ ಮಾಡಿದರೆ ತಪ್ಪೇನು? ಎಂದು ಕೇಳಿದ್ದಾಳೆ. ಮಾತ್ರವಲ್ಲ, ಇವರ್ಯಾಕೆ ಇಷ್ಟೊಂದು ಸಿಸಿಟಿವಿ ಅಳವಡಿಸಬೇಕು, ನಮ್ಮ ಪ್ರೈವೆಸಿಗೆ ಧಕ್ಕೆ ಬರುತ್ತದೆ ಅದರಿಂದ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಕ್ಯಾಂಪಸ್ನಲ್ಲಿ ಮದ್ಯಪಾನ-ಧೂಮಪಾನ ಮಾಡುವುದು ನಮ್ಮ ಹಕ್ಕು ಎಂದೂ ವಾದಿಸಿದ್ದಾಳೆ. ಈಕೆ ಮಾತಾಡಿದ್ದ ವಿಡಿಯೋ ಈಗ ವೈರಲ್ ಆಗಿದೆ. -ಏಜೆನ್ಸೀಸ್