ಕಾಸರಗೋಡು : ಪೆÇಲೀಸರನ್ನು ಕಂಡು ಪರಾರಿಯಾಗುವ ಯತ್ನದಲ್ಲಿದ್ದ ಕಾರು ಪಲ್ಟಿಯಾಗಿ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ. ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಪೆರಾಲ್‍ಕಣ್ಣೂರು ನಿವಾಸಿ ಫರಾಸ್(19) ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಇತರ ಮೂವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಓಣಂ ಆಚರಣೆಯ ಅಂಗವಾಗಿ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಮಧ್ಯೆ ಗಸ್ತು ತಿರುಗುತ್ತಿದ್ದಎಸ್‍ಐ ಮತ್ತು ಪೊಲೀಸರ ತಂಡ ಅಂಗಡಿಮೊಗರು ಭಾಗಕ್ಕೆ ಆಗಮಿಸಿದ್ದರು. ಪೊಲೀಸ್ ವಾಹನವನ್ನು ಕಂಡು ಕಾರಿನಲ್ಲಿದ್ದ ವಿದ್ಯಾರ್ಥಿಗಳು ಕಾರನ್ನು ಏಕಾಏಕಿ ಹಿಂದಕ್ಕೆ ತೆಗೆಯುತ್ತಿದ್ದಂತೆ ಪೊಲೀಸ್ ವಾಹನಕ್ಕೆ ಕಾರಿನ ಬಾಗಿಲು ಬಡಿದಿತ್ತು. ಕಾರಿನ ನಂಬರ್ ಗುರುತಿಸಲು ಪೊಲೀಸರು ಕಾರನ್ನು ಹಿಂಬಾಲಿಸಿದ್ದರು. ಕಾರಿನ ನಂಬರ್ ಖಚಿತಪಡಿಸಿಕೊಂಡ ಪೊಲೀಸರು ಅಲ್ಲಿಂದ ಅಂಗಡಿಮೊಗರಿಗೆ ವಾಪಸಾಗಿದ್ದರು. ಸುಮಾರು ನಾಲ್ಕು ಕಿಲೋಮೀಟರ್ ವರೆಗೆ ಸಂಚರಿಸಿದ ಕಾರು ವಿಕಾಸ್ ನಗರ ಎಂಬಲ್ಲಿ ಪಲ್ಟಿಯಾಗಿದೆ.