ನವದೆಹಲಿ: ಕಳೆದ ಆರ್ಥಿಕ ವರ್ಷದಲ್ಲಿ ಕೇರಳಕ್ಕೆ ನೀಡಲಾಗಿದ್ದ ಆಹಾರ ಧಾನ್ಯ ಹಂಚಿಕೆಯನ್ನು ಸಂಪೂರ್ಣವಾಗಿ ತೆಗೆದುಕೊಂಡು ವಿತರಿಸಿಲ್ಲ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಈ ಅವಧಿಯಲ್ಲಿ ಕೇರಳವು ವಿವಿಧ ಯೋಜನೆಗಳ ಅಡಿಯಲ್ಲಿ ಹಂಚಿಕೆಯಾದ 22.28 ಲಕ್ಷ ಮೆಟ್ರಿಕ್ ಟನ್‍ಗಳಲ್ಲಿ 20.76 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ವಿತರಿಸಿದೆ. ಓಣಂ ಸಂದರ್ಭದಲ್ಲಿ ಹೆಚ್ಚುವರಿ ಅನುದಾನವನ್ನು ರಾಜ್ಯ ಕೇಳಿಲ್ಲ. ಹಬ್ಬದ ಸಂದರ್ಭದಲ್ಲಿ ಗೋಧಿಯನ್ನು ಕಡಿಮೆ ಬೆಂಬಲ ಬೆಲೆಯಲ್ಲಿ ಮತ್ತು ಅಕ್ಕಿಯನ್ನು ಪರಿಷ್ಕøತ ಬೆಂಬಲ ಬೆಲೆಯಲ್ಲಿ ಅನುಮತಿಸಲಾಗುವುದು ಎಂದು ಸಚಿವರು ಹೇಳಿರುವರು.